ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ: ಸಲಹೆ

Last Updated 23 ಜನವರಿ 2022, 11:53 IST
ಅಕ್ಷರ ಗಾತ್ರ

ಶಿರಸಂಗಿ: ‘ಪಗಡೆ ಪಂದ್ಯಗಳನ್ನು ರಾಜ–ಮಹಾರಾಜರು ಆಡುತ್ತಿದ್ದರು. ಈ ಆಟ ತನ್ನದೆ ಮಹತ್ವವನ್ನು ಹೊಂದಿದೆ’ ಎಂದು ಪಿಕೆಪಿಎಸ್ ಉಪಾಧ್ಯಕ್ಷ ಮಕ್ತುಮ್ ಯಲಿಗಾರ ಹೇಳಿದರು.

ಸಮೀಪದ ಕಲ್ಲಾಪುರ ಗ್ರಾಮದಲ್ಲಿ ಅಲ್ಲಿನ ಕಲ್ಮೇಶ್ವರ ಟ್ರಸ್ಟ್ ಸಮಿತಿ ಹಾಗೂ ಕಲ್ಮೇಶ್ವರ ಪಗಡೆ ತಂಡದಿಂದ ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ಅವರ 55ನೇ ಹುಟ್ಟುಹಬ್ಬ ಮತ್ತು ಗಣರಾಜ್ಯೋತ್ಸವ ಅಂಗವಾಗಿ ಶನಿವಾರ ರಾತ್ರಿ ಕಲ್ಮೇಶ್ವರ ದೇವಸ್ಥಾನ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಹೊನಲು ಬೆಳಕಿನ ಮುಕ್ತ ಪಗಡೆ ಟೂರ್ನಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮ, ಸ್ಪರ್ಧೆಗಳು ಆಗಾಗ ನಡೆಯಬೇಕು. ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಆದ್ಯತೆ ಕೊಡಬೇಕು’ ಎಂದರು.

ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಮಹಾರಾಜ ಕಣವಿ ಮಾತನಾಡಿದರು.

ಮುಖಂಡರಾದ ರುದ್ರಯ್ಯ ಹೊಸಮಠ, ಶಿವಪ್ಪ ಹಾಲೋಳ್ಳಿ ಜ್ಯೋತಿ ಬೆಳಗಿಸಿದರು.

ಗುರುಪಾದಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ದೇವಸ್ಥಾನದ ಅಧ್ಯಕ್ಷ ಫಕೀರಪ್ಪ ಓಗಳಾಪೂರ ಅಧ್ಯಕ್ಷತೆ ವಹಿಸಿದ್ದರು.

ಪಿಕೆಪಿಎಸ್ ಅಧ್ಯಕ್ಷ ಬಸಪ್ಪ ಇದ್ಲಿ, ಹುಸೇನಸಾಬ ಹಬೀಬ, ಮಲ್ಲಿಕಾರ್ಜುನ ಪೂಜಾರ, ಈರಯ್ಯ ಶಿವಪ್ಪಯ್ಯನಮಠ, ಈರಪ್ಪ ಪಂಚೇನವರ, ಸಿದ್ದಪ್ಪ ಕುರ್ತಕೋಟಿ, ಮಹಾದೇವಪ್ಪ ಮೆಣಸಿನಕಾಯಿ, ಗದಿಗೆಪ್ಪ ಕುಂಬಾರ, ಶಂಕ್ರೆಪ್ಪ ಹೂಲಿ, ಮಹಾದೇವಪ್ಪ ಒನಜೋಳ, ಶಂಕ್ರೆಪ್ಪ ಚಿಕ್ಕುಂಬಿ, ಮಲ್ಲಪ್ಪ ಕಪಲನ್ನವರ, ನಾಗರಾಜ ತುರಮರಿ ಇದ್ದರು.

ಎಚ್.ಕೆ. ಗುರ್ಲಕಟ್ಟಿ ಸ್ವಾಗತಿಸಿದರು. ವಿ.ವಿ. ವೀರನಗೌಡ್ರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT