ಬುಧವಾರ, ಅಕ್ಟೋಬರ್ 28, 2020
24 °C

ಭತ್ತಕ್ಕೆ ‘ಕಂದು ಜಿಗಿ ಹುಳ’ದ ಬಾಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ತಾಲ್ಲೂಕಿನ ಕೆಲವು ಭಾಗಗಳಲ್ಲಿ ಭತ್ತದ ಬೆಳೆಗೆ ‘ಕಂದು ಜಿಗಿ ಹುಳ’ದ ಬಾಧೆ ಕಂಡುಬಂದಿದೆ.

‘ಇದು ಬೆಳೆಗೆ ತೀವ್ರ ಹಾನಿ ಮಾಡುವ ಕೀಟವಾಗಿದೆ. ಚಿಕ್ಕ ಬೆಣೆಯಾಕಾರದ ಕಂದು ಬಣ್ಣದ ಪ್ರೌಢ ಮತ್ತು ಮರಿ ಕೀಟಗಳು ನೀರಿನ ಮಟ್ಟದ ಮೇಲ್ಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿ ಆವರಿಸಿ ರಸ ಹೀರುತ್ತವೆ. ಇದರಿಂದಾಗಿ ಪೈರು ಒಣಗಿ ಅಲ್ಲಲ್ಲಿ ಸುಟ್ಟು ಹೋದಂತೆ ಕಂಡುಬರುತ್ತದೆ. ಇದರ ಬಾಧೆಯಿಂದ ಶೇ 90ರವರೆಗೂ ಹಾನಿಯಾಗುವ ಸಂಭವವಿರುತ್ತದೆ. ಹೀಗಾಗಿ, ರೈತರು ನಿರ್ಲಕ್ಷ್ಯ ಮಾಡದೆ ತುರ್ತಾಗಿ ನಿಯಂತ್ರಣ ಕ್ರಮವನ್ನು ಕೈಗೊಳ್ಳಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಆರ್‌.ಬಿ. ನಾಯ್ಕರ್‌ ಸಲಹೆ ನೀಡಿದ್ದಾರೆ.

‘ಪರಿಣಾಮಕಾರಿ ಹತೋಟಿಗಾಗಿ ಗದ್ದೆಯಲ್ಲಿನ ನೀರನ್ನು ಬಸಿದು ಬುಪ್ರೋಫೆಜಿನ್ 1 ಎಂ.ಎಲ್. ಅನ್ನು ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಪೈರಿನ ಬುಡ ಚೆನ್ನಾಗಿ ತೊಯ್ಯುವಂತೆ ಸಿಂಡಿಸಬೇಕು. 2ರಿಂದ 3 ದಿನಗಳ ನಂತರ ನೀರು ಕಟ್ಟಬೇಕು. ಈ ಹಂತದಲ್ಲಿ ಸಾರಜನಕ ಗೊಬ್ಬರ ಹಾಕಬಾರದು. ಸಾರಜನಕ ಗೊಬ್ಬರದಿಂದ ಬಾಧೆಯು ಉಲ್ಬಣವಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು