ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ: ಸುವರ್ಣ ಮಹೋತ್ಸವ ಇಂದಿನಿಂದ

Last Updated 5 ಫೆಬ್ರುವರಿ 2023, 6:14 IST
ಅಕ್ಷರ ಗಾತ್ರ

ಖಾನಾಪುರ: ತಾಲ್ಲೂಕಿನ ಗಾಡಿಕೊಪ್ಪ ಗ್ರಾಮದ ರಾಘವೇಂದ್ರ ಸ್ವಾಮಿ ಮಠದಲ್ಲಿ ಗುರುರಾಯರ ಬೃಂದಾವನ ಪ್ರತಿಷ್ಠಾಪನೆ ಸುವರ್ಣ ಮಹೋತ್ಸವ ಆಚರಣೆಗೆ ಅಂಗವಾಗಿ ಫೆ.5 ರಿಂದ 11ರವರೆಗೆ ವಿವಿಧ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಲಾಗಿದೆ ಎಂದು ಮಠದ ಅರ್ಚಕ ಅಚ್ಯುತ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಫೆ.5ರಂದು ನವಗ್ರಹ ಹೋಮ, ಅಷ್ಟೋತ್ತರ ಪಾರಾಯಣ, ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಮತ್ತು ಮಧ್ಯಾಹ್ನ ಅನ್ನ ಸಂತರ್ಪಣೆ, ಸಂಜೆ ವಿಶೇಷ ಉಪನ್ಯಾಸ,
ಸಂಗೀತ ಸೇವೆ, ಭಜನೆ ನಡೆಯಲಿವೆ.

6ರಂದು ಗಣಹೋಮ, 7ರಂದು ಭಾಗವತ ಹೋಮ ಹಾಗೂ 8ರಂದು ಪವಮಾನ ಹೋಮ, 9ರಂದು ರಾಘವೇಂದ್ರ ಅಷ್ಟಾಕ್ಷರ ಹೋಮ, 10ರಂದು ಮನ್ಯುಸೂಕ್ತ ಹೋಮ, 11ರಂದು ತತ್ವಹೋಮಗಳು ನಡೆಯಲಿವೆ.

ನಿತ್ಯ ಮಠದ ಆವರಣದಲ್ಲಿ ಅಷ್ಟೋತ್ತರ ಪಾರಾಯಣ, ಅಭಿಷೇಕ, ತೀರ್ಥಪ್ರಸಾದ, ಸಂಗೀತ ಸೇವೆ, ಪಂಡಿತರಿಂದ ಉಪನ್ಯಾಸಗಳು ನೆರವೇರಲಿವೆ.

ಫೆ.11ರಂದು ಮಹಾಸಂಸ್ಥಾನ ಕೂಡ್ಲಿ ಅಕ್ಷೊಭ್ಯ ಮಠಾಧೀಶ ರಘುವಿಜಯತೀರ್ಥ ಶ್ರೀಪಾಂದಗಳವರು ಬೃಂದಾವನಕ್ಕೆ 108 ಕಳಶಗಳ ವಿಶೇಷಅಭಿಷೇಕ, ವೈಕುಂಠ ರಾಮದೇವರ ಪೂಜೆ ನೆರವೇರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT