ಗುರುವಾರ , ಮೇ 19, 2022
23 °C

ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಜುಲೈ 7ರಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆಲಸಂಗ (ಬೆಳಗಾವಿ ಜಿಲ್ಲೆ): ಇಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಜುಲೈ 7ರಂದು ನಡೆಯಲಿದೆ.

ಎರಡು ತಿಂಗಳ ಹಿಂದೆ ನಿಗದಿಯಾಗಿದ್ದ ಚುನಾವಣೆಯನ್ನು ಕೋವಿಡ್‌ ಕಾರಣದಿಂದ ಮುಂದೂಡಲಾಗಿತ್ತು.

ಬಿಜೆಪಿ ಬೆಂಬಲಿತ ಸದಸ್ಯರ 2 ಬಣಗಳ ನಡುವೆಯೇ ಪೈಪೋಟಿ ಕಂಡುಬಂದಿದೆ. ಬಹುತೇಕ ಸದಸ್ಯರು ಪ್ರವಾಸದ ನೆಪದಲ್ಲಿ ಊರು ತೊರೆದಿದ್ದಾರೆ. ಇದರೊಂದಿಗೆ ಇಲ್ಲಿನ ಪಂಚಾಯ್ತಿ ಚುನಾವಣೆಯಲ್ಲಿ ರೆಸಾರ್ಟ್ ರಾಜಕೀಯ ಪ್ರವೇಶಿಸಿದಂತಾಗಿದೆ. ಮತದಾನದ ವೇಳೆಗೆ ಅವರು ಗ್ರಾಮಕ್ಕೆ ಬರಲಿದ್ದಾರೆ ಎಂದು ತಿಳಿದುಬಂದಿದೆ.

27 ಸದಸ್ಯರ ಬಲವನ್ನು ಪಂಚಾಯ್ತಿ ಹೊಂದಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. 14 ಸದಸ್ಯರ ಬೆಂಬಲ ಸಿಕ್ಕವರಿಗೆ ಗೆಲವು ಸಿಗಲಿದೆ. ಪದವೀಧರರಾದ ವಿಲಾಸ ಮೋರೆ ಮತ್ತು ಎಸ್.ಐ. ಇಂಚಗೇರಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇಂಚಗೇರಿ ಬದಲಿಗೆ ಅವರದೇ ಬಣದಿಂದ ಬಸವರಾಜ ಸಾವಳಗಿ ಅವರನ್ನು ಕಣಕ್ಕಿಳಿಸುತ್ತಾರೆಂಬ ಸುದ್ದಿ ಹರಿದಾಡುತ್ತಿದೆ. ತೀವ್ರ ಪೈಪೋಟಿ ಕಂಡುಬಂದಿರುವುದರಿಂದ ಜನರಲ್ಲಿ ಕುತೂಹಲ ಮೂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು