ಮಂಗಳವಾರ, ಜನವರಿ 25, 2022
28 °C

ಸ್ವಂತ ಹಣದಲ್ಲಿ ದೇವಸ್ಥಾನ: ಪುರಸಭೆ ಸದಸ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಥಣಿ: ‘ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸಿ ಮಾದರಿ ಆಗಬೇಕು ಎಂದುಕೊಂಡಿದ್ದೇನೆ’ ಎಂದು ಇಲ್ಲಿನ ಪುರಸಭೆ ವಾರ್ಡ್‌ ನಂ.11ರ ಕಾಂಗ್ರೆಸ್ ಸದಸ್ಯ ರಾವಸಾಬ ಐಹೊ‌ಳೆ ತಿಳಿಸಿದರು.

ವಾರ್ಡ್‌ನ ಕನಕನಗರದಲ್ಲಿ ಲಕ್ಷ್ಮಿ ದೇವಸ್ಥಾನ ನಿರ್ಮಾಣಕ್ಕೆ ಸೋಮವಾರ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ದೇವಸ್ಥಾನ ಕಟ್ಟಿಸುವುದಾಗಿ ಭರವಸೆ ನೀಡಿದ್ದೆ. ಅದರಂತೆ ನಡೆದುಕೊಳ್ಳುತ್ತಿದ್ದೇನೆ. ಭರಸವೆಗಳನ್ನು ಈಡೇರಿಸಿದರೆ ಜನರು ನಮ್ಮನ್ನು ನಂಬುತ್ತಾರೆ. ಮುಂದಿನ ಚುನಾವಣೆಗಳಲ್ಲಿ ಗೆಲ್ಲಿಸುತ್ತಾರೆ. ಇಂತಹ ರಾಜಕಾರಣ ಈಗಿನ ಅವಶ್ಯ’ ಎಂದರು.

ಲಕ್ಷ್ಮಿ ದೇವಸ್ಥಾನದ ಅಧ್ಯಕ್ಷ ಪರಶುರಾಮ ಚುಬಚಿ, ‘ಸದಸ್ಯರು ಕೆಲವೇ ದಿನಗಳಲ್ಲಿ ಭರವಸೆಯಂತೆ ನಡೆದುಕೊಳ್ಳುತ್ತಿದ್ದಾರೆ. ಎಷ್ಟು ಹಣ ಖರ್ಚಾದರೂ ಕೊಡುವುದಾಗಿ ತಿಳಿಸಿದ್ದಾರೆ’ ಎಂದರು.

ಕಾಂಗ್ರೆಸ್ ಮುಖಂಡರಾದ ಅನಿಲ ಸುಣದೋಳ್ಳಿ, ಸದಾಶಿವ ಬುಟಾಳಿ, ವಿನಾಯಕ ದೇಸಾಯಿ, ಪುರಸಭೆ ಸದಸ್ಯರಾದ ವಿ. ಐಹೊಳೆ, ಸೈಯದಮೀನ ಗದ್ಯಾಳ, ವೀನರಾಜ ಯಳಮಲ್ಲಿ, ಸ್ಥಳೀಯರಾದ ರಮೇಶ ಬಾದವಾಡಗಿ, ಶಿವನಾಂದ ದೊಡಮನಿ, ಬಾವುಸಾಬ ದೊಡಮನಿ, ಆರ್‌.ಡಿ. ದೊಡಮನಿ, ಅಣ್ಣಾಸಾಬ ಪಾಟೀಲ, ಮಲ್ಲಪ್ಪ ಕಾಂಬಳೆ, ತುಕಾರಾಮ ಸೂರ್ಯವಂಶಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.