ತೇರದಾಳ: ಇಲ್ಲಿನ ಗುರುದೇವ ಬ್ರಹ್ಮಾನಂದ ಆಶ್ರಮದ ಬಳಿಯ ಹಾರೂಗೇರಿ ರಸ್ತೆಯ 1ನೇ ಕಾಲುವೆ ಹತ್ತಿರದ ಶಂಕರ ಕುಂಬಾರ ಎಂಬುವವರಿಗೆ ಸೇರಿದ ತೋಟದಲ್ಲಿ ಸಾಕಿದ್ದ 9 ಟಗರು ಮರಿಗಳನ್ನು ಕಳ್ಳತನ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಶಂಕರ ಅವರು ಹಲವು ವರ್ಷಗಳಿಂದ ತಮ್ಮ ತೋಟದಲ್ಲಿ ಆಡು, ಕುರಿ ಸಾಕಾಣಿಕೆ ಮಾಡುತ್ತಿದ್ದು, ಸಾಕಾಣಿಕೆ ಕೇಂದ್ರದ ಸುತ್ತಲೂ ತಂತಿ ಬೇಲಿ, ಮೇಲೆ ತಗಡಿನ ಶೀಟ್ ಆಸರೆ ಹಾಕಿ ಕಾವಲುಗಾರರನ್ನು ನೇಮಿಸಿದ್ದರು.

ಕಳ್ಳರು ತೋಟಕ್ಕೆ ನುಗ್ಗಿ ಟಗರು ಮರಿಗಳನ್ನು ಹೊರಗೆ ತೆಗೆದುಕೊಳ್ಳಲು ಬೇಕಾಗುವಷ್ಟು ಮಾತ್ರ ಜಾಳಿಗೆಯನ್ನು ಕತ್ತರಿಸಿ 9 ಟಗರು ಮರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಬೆಳಿಗ್ಗೆ ಈ ವಿಷಯ ಕಾವಲುಗಾರನ ಗಮನಕ್ಕೆ ಬಂದಿದೆ.

ಮಾಲೀಕ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-19-1142611533

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.