ಶನಿವಾರ, ಸೆಪ್ಟೆಂಬರ್ 21, 2019
21 °C

ಹಾಫ್ ಮ್ಯಾರಥಾನ್: 300 ಮಂದಿ ಭಾಗಿ

Published:
Updated:
Prajavani

ಬೆಳಗಾವಿ: ಜಿಲ್ಲೆಯಲ್ಲಿ ನೆರೆ ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆಗೆ ಶ್ರಮಿಸಿದವರು ಹಾಗೂ ನೆರವಾದವರಿಗೆ ಧನ್ಯವಾದ ಸಮರ್ಪಿಸುವ ಉದ್ದೇಶದಿಂದ ಲೇಕ್‌ವ್ಯೂ ಪ್ರತಿಷ್ಠಾನ, ರೋಟರಿ ಕ್ಲಬ್‌ ವೇಣುಗ್ರಾಮ ವತಿಯಿಂದ ತಾಲ್ಲೂಕಿನ ಕಿಣಯೆ ಬಳಿಯಿಂದ 5 ಕಿ.ಮೀ. ಹಾಫ್‌ ಮ್ಯಾರಾಥಾನ್‌ ಭಾನುವಾರ ಆಯೋಜಿಸಲಾಗಿತ್ತು.

ರಿಜೆಂಟ್ ರೆಸಾರ್ಟ್‌ ಬಳಿ ಆರಂಭವಾಗಿ ಮುಕ್ತಾಯವಾದ ಓಟಕ್ಕೆ ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌, ಉದ್ಯಮಿ ಆಶಿಫ್‌ ಚಾಲನೆ ನೀಡಿದರು. 300 ಮಂದಿ ಭಾಗವಹಿಸಿದ್ದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಲೋಕೇಶ್‌ಕುಮಾರ್, ‘ರೋಟರಿ ಕ್ಲಬ್‌ಗಳು, ಗ್ರೀನ್‌ ಸೇವಿಯರ್‌, ಐಎಂಎ ಬೆಳಗಾವಿ, ಜಿತೋ, ವೇಣುಗ್ರಾಮ ಸೈಕ್ಲಿಂಗ್ ಕ್ಲಬ್‌, ಲೇಕ್‌ವ್ಯೂ ಪ್ರತಿಷ್ಠಾನ ಸೇರಿದಂತೆ ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳು (ಎನ್‌ಜಿಒ) ಸಂತ್ರಸ್ತರಿಗೆ ನೆರವಾಗಿವೆ. ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವ ಸವಾಲು ನಮ್ಮೆಲ್ಲರ ಮುಂದಿದೆ. ಇದಕ್ಕೂ ಎನ್‌ಜಿಗಳು ಸಹಹಾರ ನೀಡಬೇಕು’ ಎಂದು ತಿಳಿಸಿದರು.

ಕರಣ್ ಹಾಗೂ ರಾಶಿಕಾ ಜುಂಬಾ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಕೆನರಾ ಬ್ಯಾಂಕ್‌ ವಿಭಾಗೀಯ ವ್ಯವಸ್ಥಾಪಕ ಸಂಗಮೇಶ ಪಡನಾಡ, ರೊಟೇರಿಯನ್ ರಾಜೇಶ್‌ ತಲೆಗಾಂವ, ಡಾ.ಶಶಿಕಾಂತ ಕುಲಗೋಡ ಮಾತನಾಡಿದರು.

ಡಿಸಿಪಿ ಯಶೋಧಾ ವಂಟಗೋಡಿ, ನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಶಶಿಧರ ನಾಡಗೌಡ ಇದ್ದರು.

ರೋಟೇರಿಯನ್ ವಿನಯ್ ಬಾಳಿಕಾಯಿ ಸ್ವಾಗತಿಸಿದರು.  ಆರ್‌.ಬಿ. ಪಾಟೀಲ ವಂದಿಸಿದರು.

Post Comments (+)