ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ ಕ್ಷೇತ್ರಕ್ಕೆ ಮಠಗಳ ಕೊಡುಗೆ ಅಪಾರ: ಸಚಿವ ಸತೀಶ್‌ ಜಾರಕಿಹೊಳಿ

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿಕೆ
Published : 11 ಸೆಪ್ಟೆಂಬರ್ 2024, 14:41 IST
Last Updated : 11 ಸೆಪ್ಟೆಂಬರ್ 2024, 14:41 IST
ಫಾಲೋ ಮಾಡಿ
Comments

ಹುಕ್ಕೇರಿ: ಉತ್ತರ ಕರ್ನಾಟಕದಲ್ಲಿ ಮಠ -ಮಾನ್ಯಗಳು ಶೈಕ್ಷಣಿಕ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿವೆ. ಈ ನಿಟ್ಟಿನಲ್ಲಿ ಔಜೀಕರ ಜ್ಞಾನಯೋಗಾಶ್ರಮವು ಶಿಕ್ಷಣ ಸಂಸ್ಥೆ ಆರಂಭಿಸಲು ಮುಂದಾದಲ್ಲಿ ಎಲ್ಲ ರೀತಿಯ ಸಹಾಯ, ಸಹಕಾರ ನೀಡಲು ಸಿದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಹೊರವಲಯದ ಕ್ಯಾರಗುಡ್ ಬಳಿಯ ಔಜೀಕರ ಜ್ಞಾನಯೋಗಾಶ್ರಮದಲ್ಲಿ ಔಜೀಕರ ಮಹಾರಾಜರ ಹಾಗೂ ಜಗನ್ನಾಥ ಮಹಾರಾಜರ ಸ್ಮರಣಾರ್ಥ ಮಂಗಳವಾರ ಏರ್ಪಡಿಸಿದ್ದ ಸಪ್ತಾಹ ಹಾಗೂ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಧಾರ್ಮಿಕ ಶ್ರದ್ಧಾ ಕೇಂದ್ರಗಳು ಧರ್ಮ ಪ್ರಸಾರದ ಜತೆ ಶೈಕ್ಷಣಿಕ ಚಟುವಟಿಕೆ ನಡೆಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಸತ್ಕಾರ: ಇದೇ ವೇಳೆ ಸಚಿವ ಸತೀಶ್‌ ಜಾರಕಿಹೊಳಿ ಅವರನ್ನು ಸತ್ಕರಿಸಲಾಯಿತು.

ಆಶ್ರಮದ ಮುಖ್ಯಸ್ಥ ಮಲ್ಲೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಇಂಚಗೇರಿ ಮಠದ ರೇವಣಸಿದ್ದೇಶ್ವರ ಮಹಾರಾಜರು, ಝಂಗಟಿಹಾಳ ಚಂದ್ರಶೇಖರ ಸ್ವಾಮೀಜಿ, ಯರನಾಳ ಬ್ರಹ್ಮಾನಂದ ಸ್ವಾಮೀಜಿ, ಘೋಡಗೇರಿ ಮಲ್ಲಯ್ಯ ಸ್ವಾಮೀಜಿ, ಅಭಿನವ ಮಂಜುನಾಥ ಸ್ವಾಮೀಜಿ, ಶಾಸಕ ದುರ್ಯೋದನ ಐಹೊಳೆ, ಮಾಜಿ ಸಚಿವ ಶಶಿಕಾಂತ ನಾಯಿಕ, ಬೆಲ್ಲದ ಬಾಗೇವಾಡಿ ಬ್ಯಾಂಕ್ ಅಧ್ಯಕ್ಷ ಪವನ್ ಕತ್ತಿ, ಮಹಾವೀರ ಉದ್ಯೋಗ ಸಮೂಹ ಸಂಸ್ಥೆಯ ಚೇರಮನ್ ಮಹಾವೀರ ನಿಲಜಗಿ, ಕೆ.ಎಂ.ಎಫ್. ನಿರ್ದೇಶಕ ರಾಯಪ್ಪ ಡೂಗ, ಪುರಸಭೆ ಸದಸ್ಯ ಅಣ್ಣಾಗೌಡ ಪಾಟೀಲ, ಮುಖಂಡರಾದ ದುಂಡಪ್ಪ ಬೆಂಡವಾಡೆ, ಸಂಜು ಪಾಟೀಲ, ಮತ್ತಿತರರು ಪಾಲ್ಗೊಂಡಿದ್ದರು.

ಸಪ್ತಾಹ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಭಜನಾ ಮೇಳ, ಜಾಗರಣೆ ನಡೆಯಿತು. ನಾಡಿನ ವಿವಿಧ ಕಡೆಗಳಿಂದ ನೂರಾರು ಭಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT