ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ಹಿಂಡು; ಕಬ್ಬಿನ ಬೆಳೆ ನಾಶ -ರೈತರ ದೂರು: ಅಲ್ಲಗಳೆದ ಅರಣ್ಯಾಧಿಕಾರಿಗಳು

Last Updated 25 ಜನವರಿ 2023, 10:02 IST
ಅಕ್ಷರ ಗಾತ್ರ

ಖಾನಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಗೋಧೋಳಿ ಗ್ರಾಮದ ಹೊರವಲಯದ ಹೊಲದಲ್ಲಿ ಮಂಗಳವಾರ ಬಿಡುಬಿಟ್ಟಿದ್ದ
ಕಾಡಾನೆಗಳ ಹಿಂಡನ್ನು ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಿಗಟ್ಟಿದರು.

ಒಂದು ಮರಿ ಸಮೇತ ನಾಲ್ಕು ಆನೆಗಳು ಎರಡು ದಿನಗಳಿಂದ ಬೀಡುಬಿಟ್ಟಿದ್ದವು.

ಕಾಡಾನೆಗಳ ಹಿಂಡನ್ನು ಸ್ಥಳೀಯರ ನೆರವಿನೊಂದಿಗೆ ವಿಶೇಷ ಕಾರ್ಯಾಚರಣೆಯ ಮೂಲಕ ಮರಳಿ ದಾಂಡೇಲಿ
ಅರಣ್ಯದತ್ತ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ದಾಂಡೇಲಿ ಅರಣ್ಯದಿಂದ ಆಹಾರ ಅರಸಿ ತಾಲ್ಲೂಕಿನ ಗೋಧೋಳಿ ಗ್ರಾಮದ ಜನವಸತಿ ಪ್ರದೇಶಗಳತ್ತ ಬಂದ ಕಾಡಾನೆಗಳು ಎರಡು ದಿನಗಳಿಂದ ಇಲ್ಲಿಯೇ ಸುಳಿದಾಡಿದವು. ರೈತರ ಹೊಲ- ಗದ್ದೆಗಳಲ್ಲಿ ಬೆಳೆ ನಾಶ ಮಾಡಿದವು.

ಒಂದು ಮರಿ ಆನೆ ಸಮೇತ ನಾಲ್ಕು ಆನೆಗಳು ನಮ್ಮ ಹೊಲಗಳಲ್ಲಿ ತಂಗಿವೆ, ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ
ಎಂದು ದಯಾನಂದ ಶಿಂಧೆ, ನವೀನ ಚೋಳನೆಕರ, ಅಶೋಕ ಡೊಗುಲಕರ ಹಾಗೂ ಇತರೆ ರೈತರ ಹೇಳಿದ್ದಾರೆ.

ಕಬ್ಬಿನ ಗದ್ದೆಗಳಿಗೆ ನುಗ್ಗಿ ಕಬ್ಬು ತಿಂದು, ತುಳಿದಿವೆ. ಜಮೀನಿನ ಬದುಗಳಲ್ಲಿ ಹಚ್ಚಿದ ಸಸಿಗಳನ್ನು ತುಳಿದು ಹಾಳು ಮಾಡಿವೆ. ಗೋಧೋಳಿ ಗ್ರಾಮದ 15 ಎಕರೆಗೂ ಹೆಚ್ಚು ಕ್ಷೇತ್ರದಲ್ಲಿದ್ದ ಕಬ್ಬಿನ ಬೆಳೆಯನ್ನು ಹಾಳು ಮಾಡಿವೆ. ಕಾಡಾನೆಗಳ ದಾಳಿಯಿಂದ ಉಂಟಾದ ಬೆಳೆಹಾನಿಗೆ ಸೂಕ್ತ ಪರಿಹಾರ ವಿತರಿಸಬೇಕು ಎಂದು ರೈತರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ನಾಗರಗಾಳಿ ಉಪ ವಿಭಾಗದ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಶಿವರುದ್ರಪ್ಪ ಕಬಾಡಗಿ, 'ಜಮೀನುಗಳಲ್ಲಿ ಕಾಡಾನೆಗಳ ಹಿಂಡು ಎರಡು ದಿನಗಳಿಂದ ಸಂಚರಿಸಿ ಆತಂಕದ ಸೃಷ್ಟಿಸಿದ್ದವು. ಆದರೆ, ಕಾಡಾನೆಗಳ
ದಾಳಿಯಿಂದ ಯಾವುದೇ ಬೆಳೆಹಾನಿ ಸಂಭವಿಸಿಲ್ಲ. ಕಾಡಾನೆಗಳ ಚಲನವಲನದ ಬಗ್ಗೆ ಅರಣ್ಯ ಇಲಾಖೆ ವಿಶೇಚ ನಿಗಾ ವಹಿಸಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT