ವಿಟಿಯು– ಎಎಫ್‌ಟಿಸಿ ಒಡಂಬಡಿಕೆ

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮತ್ತು ವಾಯುದಳ ತಾಂತ್ರಿಕ ಕಾಲೇಜು (ಏರ್‌ಫೋರ್ಸ್ ಟೆಕ್ನಿಕಲ್ ಕಾಲೇಜು-ಎಎಫ್‌ಟಿಸಿ) ನಡುವೆ ಶೈಕ್ಷಣಿಕ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ವಿಟಿಯು ಕುಲಪತಿ ಪ್ರೊ.ಕರಿಸಿದ್ದಪ್ಪ ಅವರ ಉಪಸ್ಥಿತಿಯಲ್ಲಿ ಎಎಫ್‌ಟಿಸಿ ಕಮಾಂಡೆಂಟ್ ಏರ್‌ಕಮೋಡರ್ ಬಿ.ಜಿ. ಫಿಲಿಪ್ ಹಾಗೂ ವಿಟಿಯು ಕುಲಸಚಿವ ಪ್ರೊ.ಎ.ಎಸ್. ದೇಶಪಾಂಡೆ ಒಪ್ಪಂದಕ್ಕೆ ಸಹಿ ಹಾಕಿದರು.
‘ಈ ಒಪ್ಪಂದದ ಪ್ರಕಾರ ಏರ್‌ಫೋರ್ಸ್‌ನಲ್ಲಿ ನೇಮಕಗೊಂಡು ಸ್ನಾತಕೋತ್ತರ ಶಿಕ್ಷಣ ಮುಂದುವರಿಸಲು ಬಯಸುವ ಅಧಿಕಾರಿಗಳಿಗೆ ಎ.ಎಫ್.ಟಿ.ಸಿ.–ವಿಟಿಯು ಮುಖಾಂತರ ಎಂ.ಟೆಕ್. ಪದವಿ ನೀಡಬಹುದು. ಏರೊನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಬರುವ ಆರು ವಿಶೇಷ ವಿಷಯಗಳಲ್ಲಿ ಈ ಪದವಿಯನ್ನು ಎಐಸಿಟಿಇ ನಿಯಮದಂತೆ ನೀಡಲಾಗುತ್ತದೆ ಎಂದು ತಿಳಿಸಲಾಗಿದೆ. ಒಪ್ಪಂದವು ಎರಡೂ ಸಂಸ್ಥೆಗಳ ಕೌಶಲ ಮತ್ತು ಸಂಶೋಧನಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ’ ಎಂದು ಕುಲಪತಿ ಪ್ರೊ.ಕರಿಸಿದ್ದಪ್ಪ ತಿಳಿಸಿದರು.
ಗ್ರೂಪ್ ಕ್ಯಾಪ್ಟನ್ ಡಾ.ರಾಜು ಹಾಗೂ ಅಧ್ಯಯನ ವಿಭಾಗ ಮುಖ್ಯಸ್ಥ ಡಾ.ಮಹೇಶ ಎಮ್ಮಿ, ವಿಟಿಯು ವಿಶೇಷಾಧಿಕಾರಿ ಪ್ರೊ.ಎಂ.ಎಂ. ಮುನ್ಷಿ ಹಾಗೂ ಪ್ರೊ.ಎಸ್.ಬಿ. ಹಾಲಭಾವಿ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.