ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿಪ್ಪಾಣಿ | ಕಳ್ಳನ ಬಂಧನ: 10 ಬೈಕ್ ವಶಕ್ಕೆ

Published : 28 ಆಗಸ್ಟ್ 2024, 15:23 IST
Last Updated : 28 ಆಗಸ್ಟ್ 2024, 15:23 IST
ಫಾಲೋ ಮಾಡಿ
Comments

ನಿಪ್ಪಾಣಿ: ನಿಪ್ಪಾಣಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಂತರರಾಜ್ಯ ಬೈಕ್‌ ಕಳ್ಳನೊಬ್ಬನನ್ನು ಬಂಧಿಸಿದ್ದು, ಬಂಧಿತನಿಂತ 10 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರದ ಕೊಲ್ಹಾಪೂರ ಜಿಲ್ಲೆಯ ಗಡಹಿಂಗ್ಲಜ್ ತಾಲೂಕಿನ ಕರಂಬಳಿ ಗ್ರಾಮದ ವಿಶಾಲ ಸಂಜಯ ಮೋರೆ ಬಂಧಿತ ಆರೋಪಿ.

ಸ್ಥಳೀಯ ಹಾಲಸಿದ್ಧನಾಥ ಮಂದಿರದ ಬಳಿ ಸ್ಥಳೀಯ ಬಸವೇಶ್ವರ ಪೊಲೀಸ್ ಠಾಣೆಯ ಪಿಎಸ್‍ಐ ರಮೇಶ ಪವಾರ ಕಾರ್ಯನಿರತನಾಗಿದ್ದಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಕಳೆದ 3 ತಿಂಗಳಲ್ಲಿ ಉಭಯ ರಾಜ್ಯಗಳಿಂದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಸಮೀಪದ ಪಡಲಿಹಾಳ ಗ್ರಾಮದ ಮಾಳಭಾಗದ ನಿರ್ಜನ ಪ್ರದೇಶದಲ್ಲಿ 3 ದ್ವಿಚಕ್ರ ವಾಹನಗಳನ್ನು ಹಾಗೂ ಸ್ಥಳೀಯ ದನಗಳ ಪೇಟೆ ಬಳಿಯ ನಿರ್ಜನ ಪ್ರದೇಶದ ಗಿಡಗಂಟಿಗಳಲ್ಲಿ 6 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಮುಚ್ಚಿಟ್ಟಿದ್ದ. ಬಂಧಿತ ಆರೋಪಿಯಿಂದ ಒಟ್ಟು ₹4.14 ಲಕ್ಷ ಮೌಲ್ಯದ 10 ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡರು.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಬಿ.ಎಸ್. ತಳವಾರ ನೇತೃತ್ವದಲ್ಲಿ ಬಿಸಿಪಿಎಸ್ ಠಾಣೆಯ ಪಿಎಸ್‍ಐ ರಮೇಶ ಪವಾರ, ಪಿಎಸ್‍ಐ ಡಿ.ಬಿ. ಕೋತವಾಲ, ಎಎಸ್‍ಐ ಆರ್.ಜಿ. ಕುಂಭಾರ, ಸಿಬ್ಬಂದಿಗಳಾದ ಎಸ್.ಎಸ್. ಚಿಕ್ಕೋಡಿ, ಎಂ.ಎ. ತೇರದಾಳ, ಆರ್.ಬಿ. ಪಾಟೀಲ, ಎಂ.ಆರ್. ಕಾಂಬಳೆ, ಜೆ.ಪಿ. ಸಂಗೋಡಿ, ಆರ್.ಆರ್. ಮದನೆ, ವಿನೋದ ಟಕ್ಕನ್ನವರ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT