ಕಳೆದ ಸೋಮವಾರ ಮತ್ತೊಂದು ಮರ ಕಡಿಯಲು ಕಳ್ಳರು ಯತ್ನಿಸಿದ್ದಾರೆ. ಆದರೆ, ನಾಯಿಗಳಿಗೆ ಹೆದರಿ ಓಡಿಹೋಗಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ರಾಯಬಾಗ ವಲಯದ ಕಚೇರಿಯಲ್ಲಿ ದೂರು ದಾಖಲಾಗಿದೆ. ವಲಯ ಅರಣ್ಯ ಅಧಿಕಾರಿ ಉಮೇಶ ಪ್ರಧಾನಿ, ಉಪ ವಲಯ ಅರಣ್ಯಾಧಿಕಾರಿ ಶಾನೂರ್ ನದಾಫ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.