ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳ್ಳತನ: ₹13 ಲಕ್ಷಕ್ಕೂ ಅಧಿಕ ಮೌಲ್ಯದ ಸ್ವತ್ತು ಕಳವು

Last Updated 25 ಜನವರಿ 2023, 16:41 IST
ಅಕ್ಷರ ಗಾತ್ರ

ಚಿಕ್ಕೋಡಿ: ತಾಲ್ಲೂಕಿನ ಕರೋಶಿ ಗ್ರಾಮದಲ್ಲಿ ಬುಧವಾರ ನಸುಕಿನಲ್ಲಿ ಆರು ಮನೆಗಳಲ್ಲಿ ಸರಣಿ ಕಳ್ಳತನ ಮಾಡಲಾಗಿದೆ. ₹ 13 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಹಣ ದೋಚಲಾಗಿದೆ.

ವಿಶಾಲ ಪಾಂಡರೆ ಎಂಬುವವರ ಮನೆಯಲ್ಲಿ ₹ 7 ಲಕ್ಷ ನಗದು ಹಾಗೂ 12 ತೊಲಿ ಚಿನ್ನಾಭರಣ, ಕ್ಷೀರಸಾಗರ ಅವರ ಮನೆಯಲ್ಲಿ ₹12 ಸಾವಿರ ನಗದು ಹಾಗೂ ಅರ್ಧ ತೊಲಿ ಚಿನ್ನಾಭರಣ, ಯೂಸೂಫ್ ಪಟೇಲ್ ಅವರ ಅಂಗಡಿಯಲ್ಲಿ ₹8 ಸಾವಿರ ನಗದು, ತಾನಾಜಿ ಬಾಮನೆ, ಅಶೋಕ್ ಬಾಮನೆ, ಬಾಳು ಗೊರೆ ಅವರ ಮನೆಯಲ್ಲೂ ಹಣ, ವಿವಿಧ ವಸ್ತು ಕಳವು ಮಾಡಲಾಗಿದೆ.

ಪೊಲೀಸರು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದ್ದು ಎರಡು ಬೈಕ್‌ಗಳಲ್ಲಿ 6 ಮಂದಿ ಕಾಣಿಸಿಕೊಂಡಿದ್ದಾರೆ. ಚಿಕ್ಕೋಡಿ ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಪಿಎಸ್ಐ ಯಮನಾಪ್ಪ ಮಾಂಗ ಭೇಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT