ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ನಿರ್ಮಿಸಿದರೂ ಸಂಚಾರ ಬಂದ್

ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ: ಆರೋಪ
Last Updated 1 ಆಗಸ್ಟ್ 2019, 14:56 IST
ಅಕ್ಷರ ಗಾತ್ರ

ಮೋಳೆ: ಒಂದು ವಾರದಿಂದ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ಎಡಬಿಡದೇ ಸುರಿದ ಮಳೆಯಿಂದಾಗಿ ಕೃಷ್ಣಾ ನದಿಗೆ ಪ್ರವಾಹ ಬಂದು ಉಗಾರ-ಕುಡಚಿ, ಉಗಾರ ಖುರ್ದ-ಉಗಾರ ಬುದ್ರುಕ್ ನಡುವಿನ ರಸ್ತೆಗಳು ಜಲಾವೃತಗೊಂಡು ಸಾರಿಗೆ ಸಂಚಾರ ಸ್ಥಗಿತಗೊಂಡಿದೆ.

ಉಗಾರ-ಕುಡಚಿ ಮಾರ್ಗದ ಸೇತುವೆ ಮೇಲೆ 10 ಅಡಿಗಳಷ್ಟು ನೀರು ಬಂದಿದೆ.

ಉಗಾರ ಗ್ರಾಮ ಪಂಚಾಯ್ತಿಯಿಂದ ಪುರಸಭೆಗೆ ಮೇಲ್ದರ್ಜೆಗೇರಿದೆ. ಎರಡು ಅವಳಿ ಗ್ರಾಮಗಳಾಗಿದ್ದು, ಎರಡರ ನಡುವೆ ಕೇವಲ 1 ಕಿ.ಮೀ. ಅಂತರ ಇದೆ. ಪ್ರತಿ ವರ್ಷ ಮಳೆಗಾಲ ಬಂತೆಂದರೆ ಉಗಾರ ಮದ್ಯದ ತಗ್ಗು ಪ್ರದೇಶದಲ್ಲಿ ನೀರು ಆವರಿಸಿ ಸಾರಿಗೆ ಸಂಚಾರ ಕಡಿತಗೊಳ್ಳುತ್ತದೆ. ಇದನ್ನು ಮನಗಂಡ ಹಿಂದಿನ ಸಂಸದ ಪ್ರಕಾಶ ಹುಕ್ಕೇರಿ ಅವರು ಸರ್ಕಾರದಿಂದ ₹ 3 ಕೋಟಿ ಅನುದಾನ ಮಂಜೂರು ಮಾಡಿಸಿ, ಉಗಾರ ಖುರ್ದ– ಉಗಾರ ಬುದ್ರುಕ ನಡುವೆ ಸೇತುವೆ ನಿರ್ಮಿಸಿದ್ದರು. ಆದರೆ, ತಗು ಪ್ರದೇಶದಲ್ಲಿರುವ ಎರಡೂ ಬದಿಯ ಅರ್ಧ ಕಿ.ಮೀ. ರಸ್ತೆಯನ್ನು ಎತ್ತರಿಸದೇ ಇರುವುದರಿಂದ ಪ್ರಯೋಜನವಾಗಿಲ್ಲ. ಜಲಾವೃತವಾಗುವುದು ತಪ್ಪಿಲ್ಲ. ಇದರಿಂದಾಗಿ ಸರ್ಕಾರದ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಉಗಾರ ಖುರ್ದು–ಬದ್ರುಕ ರಸ್ತೆ ಜಲಾವೃತ ಆಗಿರುವುದರಿಂದಾಗಿ ಕುಸುನಾಳ, ಮೊಳವಾಡಕ್ಕೆ ಹೋಗಲು ಉಗಾರ ಖುರ್ದದಿಂದ ಉಗಾರ ಬುದ್ರುಕ, ಕುಸುನಾಳ, ಮೊಳವಾಡಕ್ಕೆ ಮಂಗಸೂಳಿ– ಶೇಡಬಾಳ ಮಾರ್ಗವಾಗಿ 30 ಕಿ.ಮೀ. ಕ್ರಮಿಸಬೇಕಾದ ಪರಿಸ್ಥಿತಿ ಬಂದಿದೆ. ಕೊಂಕಣ ಸುತ್ತಿ ಮೈಲಾರ ತಲುಪಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT