ಆಯುಕ್ತರ ಕಚೇರಿ ಎದುರು ಕ್ರಿಕೆಟ್!

7

ಆಯುಕ್ತರ ಕಚೇರಿ ಎದುರು ಕ್ರಿಕೆಟ್!

Published:
Updated:

ಬೆಳಗಾವಿ: ‘ಇಲ್ಲಿನ ಮಹಾದ್ವಾರ ರಸ್ತೆಯಲ್ಲಿರುವ ಸಂಭಾಜಿ ಮೈದಾನದಲ್ಲಿ ಕ್ರಿಕೆಟ್ ಆಡಲು ಅಧಿಕಾರಿಗಳು ಬಾಡಿಗೆ ಕೇಳುತ್ತಿದ್ದಾರೆ’ ಎಂದು ಆರೋಪಿಸಿ ಅಲ್ಲಿನ ಯುವಕರು ಶುಕ್ರವಾರ ನಗರಪಾಲಿಕೆ ಆಯುಕ್ತರ ಕಚೇರಿ ಎದುರು ಕ್ರಿಕೆಟ್ ಆಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.

‘ಹಲವು ವರ್ಷಗಳಿಂದ ಆ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದೇವೆ. ಯಾವುದೇ ಶುಲ್ಕ ವಿಧಿಸುತ್ತಿರಲಿಲ್ಲ; ಬಾಡಿಗೆ ಕೇಳಿರಲಿಲ್ಲ. ಈ ಭಾಗದಲ್ಲಿ ನಮಗಿರುವುದು ಅದೊಂದೇ ಮೈದಾನ. ಆದರೆ, ಈಗ ಪಾಲಿಕೆ ಸಿಬ್ಬಂದಿ ತೊಂದರೆ ಕೊಡುತ್ತಿದ್ದಾರೆ’ ಎಂದು ದೂರಿದರು.

ಪಾಲಿಕೆ ಸದಸ್ಯೆ ವೈಶಾಲಿ ಹುಲಜಿ ಮಾತನಾಡಿ, ‘ಮೈದಾನಗಳಲ್ಲಿಯೇ ಕ್ರಿಕೆಟ್ ಆಡಬೇಕಾಗುತ್ತದೆ. ಬೇರೆಡೆ ಆಡಲಾಗದು. ಪಾಲಿಕೆಯವರು ಬಂದು ಶುಲ್ಕ ತುಂಬುವಂತೆ ಕೇಳುತ್ತಿರುವುದು, ಆಡಲು ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ದಿನಕ್ಕೆ ₹ 2500 ಬಾಡಿಗೆ ಕೇಳುತ್ತಿದ್ದಾರೆ. ಇಂತಹ ನಿಯಮಗಳನ್ನು ಆಟಗಳಿಗೆ ಅನ್ವಯಿಸಬಾರದು’ ಎಂದು ಒತ್ತಾಯಿಸಿದರು.

ಸುನೀಲ ಬಾಳೆಕುಂದ್ರಿ, ಅಭಿಜಿತ ಚವಾಣ, ರಾಜು ಭಾತಖಾಂಡೆ, ರವೀಂದ್ರ ಹುಲಜಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !