ಬೆಳಗಾವಿ: ನಕಲಿ ನೋಟು ಚಲಾವಣೆ ಯತ್ನ- ಮೂವರ ಬಂಧನ

ಬೆಳಗಾವಿ: ಜಿಲ್ಲೆಯ ಘಟಪ್ರಭಾದಲ್ಲಿ ಮಂಗಳವಾರ ರಾತ್ರಿ, ಬಾರ್ ನಲ್ಲಿ ನಕಲಿ ನೋಟು ಚಲಾಯಿಸಲು ಯತ್ನಿಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹500 ಮುಖಬೆಲೆಯ 473 ನಕಲಿ ನೋಟುಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಬಾರಿನಲ್ಲಿ ಕುಡಿದು ಪಾರ್ಟಿ ಮಾಡಿದ ಮೇಲೆ, ಆರೋಪಿಗಳು ಮಂದ ಬೆಳಕಿನಲ್ಲಿ ನಕಲಿ ನೋಟುಗಳನ್ನು ನೀಡಿ ಬಾರ್ ಮಾಲೀಕರನ್ನು ಯಾಮಾರಿಸಲು ಯತ್ನಿಸಿದರು. ಕೈಯಲ್ಲಿ ನೋಟು ಹಿಡಿದಾಗ ಅನುಮಾನ ಬಂದ ಬಾರಿನ ವ್ಯಕ್ತಿ, ಲೈಟ್ ಬೆಳಕಿಗೆ ಹಿಡಿದು ಪರಿಶೀಲಿಸಿದರು. ನೋಟುಗಳು ನಕಲಿ ಎಂದು ಗೊತ್ತಾದ ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಆರೋಪಿಗಳನ್ನು ಒಪ್ಪಿಸಿದರು.
ಈ ಎಲ್ಲ ನೋಟುಗಳೂ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾದಿಂದ ಪ್ರಿಂಟ್ ಮಾಡಿದವು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.