ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೋರಣಹಳ್ಳಿ: ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

Published 11 ಆಗಸ್ಟ್ 2024, 15:49 IST
Last Updated 11 ಆಗಸ್ಟ್ 2024, 15:49 IST
ಅಕ್ಷರ ಗಾತ್ರ

ಚಿಕ್ಕೋಡಿ: ಜನರ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಅವಶ್ಯಕತೆ ಇದೆ. ಸಹಕಾರಿ ಧುರೀಣ, ಯುವ ಮುಖಂಡ ಅಮಿತ್ ಕೋರೆ ನೇತೃತ್ವದ ಜನಶಕ್ತಿ ಫೌಂಡೇಶನ್ ವತಿಯಿಂದ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ತೋರನಹಳ್ಳಿಯ ಹನುಮಾನ ದೇವಸ್ಥಾನ ಹತ್ತಿರ ಶುದ್ಧ ಕುಡಿಯುವ ನೀರು ಘಟಕವನ್ನು ನಿರ್ಮಾಣಿಸಲಾಗಿದೆ  ಎಂದು ಚಿಕ್ಕೋಡಿಯ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಹೇಳಿದರು

ತಾಲೂಕಿನ ತೋರಣಹಳ್ಳಿಯ ಹನುಮಾನ ದೇವಸ್ಥಾನ ಹತ್ತಿರ ಜನಶಕ್ತಿ ಫೌಂಡೇಶನ್ ವತಿಯಿಂದ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.

 ಸಿ.ಬಿ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಭರತೇಶ ಬಣವನೆ, ಮಾರುತ್ರಿ ದೇವಸ್ಥಾನ ಟ್ರಸ್ಟ್  ರಾಮಗೌಡಾ ಸಣ್ಣಲಚ್ಚಪ್ಪಗೋಳ, ಭೀಮಾ ಸಣ್ಣಲಚ್ಚಪ್ಪಗೋಳ, ಅಶೋಕ ಖಾಡೆ ಬಸವರಾಜ ಮಾಳಗೆ ವಿಠಲ ಜೋಗೆ, ಪುಂಡಲೀಕ  ದೊಡ್ಡಲಚ್ಚಪಗೋಳ, ಕೆಂಪಣ್ಣ ಪಾಟೀಲ, ಪಾಂಡುರಂಗ ಸಣ್ಣಲಚ್ಚಪ್ಪಗೋಳ, ಶಂಕರ ಬುನ್ನಟ್ಟ, ಅಣ್ಣಸಾಹೇಬ ಜೋಗೆ, ಹಣಬರ್ ಸಮಾಜ ಜಿಲ್ಲಾಧ್ಯಕ್ಷ ಶೀತಲ ಮುಂಡೆ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT