ಬೈಲಹೊಂಗಲ: ಟ್ರ್ಯಾಕ್ಟರ್ ಟ್ರೈಲರ್ ಕಳವು ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ₹5 ಲಕ್ಷ ಮೌಲ್ಯದ ನಾಲ್ಕು ಟ್ರ್ಯಾಕ್ಟರ್ ಟ್ರೈಲರ್ ಮತ್ತು ಕೃತ್ಯಕ್ಕೆ ಬಳಸಿದ ಒಂದು ಟ್ರ್ಯಾಕ್ಟರ್ ಎಂಜಿನ್‌ನ್ನು ಗುರುವಾರ ಪೊಲೀಸರು ಜಪ್ತಿ ಪಡಿಸಿಕೊಂಡಿದ್ದಾರೆ.
ಸವದತ್ತಿ ತಾಲ್ಲೂಕಿನ ಮರಕುಂಬಿ ಗ್ರಾಮದ ಅಡಿವೆಪ್ಪ ನಾಗಪ್ಪ ಕಳಸನ್ನವರ (34) ಬಂಧಿತ ಆರೋಪಿ.
ಈತ ತಾಲ್ಲೂಕಿನ ಸಾಣಿಕೊಪ್ಪ ಗ್ರಾಮದ ಹದ್ದಿಯಲ್ಲಿ ಟ್ರ್ಯಾಕ್ಟರ್ ಟ್ರೈಲರ್ ಕಳುವು ಮಾಡಿದ್ದ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕಳ್ಳನ ಪತ್ತೆಗೆ ಬೆಳಗಾವಿ ಎಸ್‌ಪಿ ಭೀಮಾಶಂಕರ ಗುಳೇದ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್.ಪಿ.ಗಳಾದ ಶ್ರುತಿ ಕೆ, ಆರ್.ಬಿ.ಬಸರಗಿ, ಡಿವೈಎಸ್ಪಿ ರವಿ ನಾಯ್ಕ, ಪಿಐ ಪಂಚಾಕ್ಷರಿ ಸಾಲಿಮಠ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.