ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರ್ಯಾಕ್ಟರ್‌ಗಳ ಚಕ್ರಗಳ ಕಳವು: 7 ಆರೋಪಿಗಳ ಬಂಧನ

Last Updated 18 ಸೆಪ್ಟೆಂಬರ್ 2020, 14:51 IST
ಅಕ್ಷರ ಗಾತ್ರ

ಬೆಳಗಾವಿ: ರಸ್ತೆ ಬದಿ ಹಾಗೂ ತೋಟದ ಮನೆಗಳ ಬಳಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ ಟ್ರೇಲರ್‌ಗಳ ಡಿಸ್ಕ್‌ ಸಮೇತ ಚಕ್ರಗಳನ್ನು ಕದಿಯುತ್ತಿದ್ದ ಆರೋಪದ ಮೇಲೆ ಏಳು ಮಂದಿಯನ್ನು ಶುಕ್ರವಾರ ಬಂಧಿಸಿರುವ ಖಡಕಲಾಟ ಠಾಣೆ ಪೊಲೀಸರು, ಅವರಿಂದ ₹ 8.61 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.

ನಿಪ್ಪಾಣಿ ತಾಲ್ಲೂಕು ಗಳತಗಾದ ಮಾರುತಿ ಠೊಣ್ಣೆ, ಮಹಾದೇವ ಮಾಕಾಳೆ, ಬಾಬು ಡಾಲೆ, ಶಿವಾನಂದ ಗಜಬರ, ಖಾನಾಪುರ ತಾಲ್ಲೂಕು ಕಕ್ಕೇರಿಯ ಸಂಜು ಅಂಬಡಗಟ್ಟಿ ಶ್ರಾವಣ ಹುಲಮನಿ ಹಾಗೂ ಘಷ್ಟೊಳಿ ದಡ್ಡಿಯ ಸಂತೋಷ ನಾಗಣ್ಣವರ ಬಂಧಿತರು.

‘ಅವರು ಖಡಕಲಾಟ, ನಿಪ್ಪಾಣಿ, ಸದಲಗಾ, ಹುಕ್ಕೇರಿ, ಸಂಕೇಶ್ವರ, ಯಮಕನಮರಡಿ, ಚಿಕ್ಕೋಡಿ, ಅಂಕಲಿ, ಕಿತ್ತೂರ, ಹಾರೂಗೇರಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವು ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ. ಅವರಿಂದ ₹ 4.60 ಲಕ್ಷ ಮೌಲ್ಯದ ಡಿಸ್ಕ್‌ ಸಮೇತ 46 ಚಕ್ರಗಳು, 2 ಟಾಟಾ ಸುಮೊ ವಾಹನ ಹಾಗೂ ಕಳವು ಮಾಡಲು ಬಳಸುತ್ತಿದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಖಡಕಲಾಟ ಪಿಎಸ್‌ಐ ಎಸ್.ಎಸ್. ಮಂಟೂರ ಹಾಗೂ ನಿಪ್ಪಾಣಿ ಪಿಎಸ್‌ಐ ಬಿ.ಎಸ್. ತಳವಾರ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT