60 ಆಟೊರಿಕ್ಷಾ ಚಾಲಕರಿಗೆ ದಂಡ

ಭಾನುವಾರ, ಜೂಲೈ 21, 2019
25 °C

60 ಆಟೊರಿಕ್ಷಾ ಚಾಲಕರಿಗೆ ದಂಡ

Published:
Updated:
Prajavani

ಬೆಳಗಾವಿ: ನಗರದಲ್ಲಿ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ 60 ಆಟೊರಿಕ್ಷಾ ಚಾಲಕರ ವಿರುದ್ಧ ಉತ್ತರ ಸಂಚಾರ ಠಾಣೆ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿ, ದಂಡ ವಿಧಿಸಿದ್ದಾರೆ.

ಇನ್‌ಸ್ಪೆಕ್ಟರ್‌ ಆರ್‌.ಆರ್‌. ಪಾಟೀಲ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ನಿಯಮ ಉಲ್ಲಂಘಿಸಿದ ಚಾಲಕರಿಗೆ ಬಿಸಿ ಮುಟ್ಟಿಸಿದರು.

ರಾಮದೇವ್‌ ಹೋಟೆಲ್‌ ಬಳಿ ಒಂದೇ ಆಟೊರಿಕ್ಷಾದಲ್ಲಿ 12 ಮಕ್ಕಳನ್ನು ಸಾಗಿಸುತ್ತಿದ್ದುದು ಕಂಡುಬಂತು. ಚಾಲಕನಿಗೆ ದಂಡ ವಿಧಿಸಿ, ಹೆಚ್ಚುವರಿ ಮಕ್ಕಳು ಶಾಲೆಗೆ ಹೋಗಲು ತೊಂದರೆಯಾಗದಿರಲೆಂದು ಪೊಲೀಸ್‌ ವಾಹನದಲ್ಲಿಯೇ ಅವರನ್ನು ಕರೆದೊಯ್ಯಲಾಯಿತು.

ಆಟೊರಿಕ್ಷಾ ಚಾಲಕರು ನಿಯಮ ಪಾಲಿಸಬೇಕು. ನಿಗದಿಪಡಿಸಿದ ಮಕ್ಕಳನ್ನಷ್ಟೇ ಕರೆದೊಯ್ಯಬೇಕು. ಪೋಷಕರು ಕೂಡ ಈ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಪೊಲೀಸರು ಕೋರಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !