ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ್ ಕಾಲೇಜಿನಲ್ಲಿ ತರಬೇತಿ ಕಾರ್ಯಕ್ರಮ

Last Updated 21 ಅಕ್ಟೋಬರ್ 2020, 11:40 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಜೈನ್ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್‌ ಹಾಗೂ ಎಲೆಕ್ಟ್ರಾನಿಕ್ಸ್ ವಿಭಾಗದಿಂದ ದ್ವಿತೀಯ ಮತ್ತು 3ನೇ ವರ್ಷದ ವಿದ್ಯಾರ್ಥಿಗಳು, ಗೇಟ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಆನ್‌ಲೈನ್ ಮೂಲಕ ಕ್ವಾಂಟಿಟೇಟಿವ್‌ ಅಪ್ಟಿಟ್ಯೂಡ್ ತರಬೇತಿ ಕಾರ್ಯಕ್ರಮ ನಡೆಯಿತು.

ಪ್ರಾಂಶುಪಾಲ ಹಾಗೂ ನಿರ್ದೇಶಕ ಡಾ.ಕೆ.ಜಿ. ವಿಶ್ವನಾಥ ತರಬೇತಿಯ ಮಹತ್ವ ಕುರಿತು ವಿವರಿಸಿದರು.

ವಿಭಾಗದ ಮುಖ್ಯಸ್ಥ ಡಾ.ಜಿ.ಎಚ್. ಕುಲಕರ್ಣಿ, ‘ವಿಭಾಗದಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವಶ್ಯವಾದ ಕೌಶಲಗಳನ್ನು ಕಲಿಸಲಾಗುತ್ತಿದೆ’ ಎಂದರು.

ಸಂಪನ್ಮೂಲ ವ್ಯಕ್ತಿ ಮಹಾಂತೇಶ ದೇವೂರ ಮಾರ್ಗದರ್ಶನ ನೀಡಿದರು. ಇಇಇ ವಿಭಾಗದ ಬೋಧಕರಾದ ಪ್ರೊ.ನಾಗರಾಜ ಐಹೊಳ್ಳಿ, ಪ್ರೊ.ವಿನೋದ ಎಸ್. ಪಾಟೀಲ, ಪ್ರೊ.ವಿನೋದಕುಮಾರ ಮಠದ, ಡಾ.ದೇಬ್ರಾಜ ಸರ್ಕಾರ, ಡಾ.ತಾಮಲಿಕಾ ಚೌದರಿ, ಪ್ರೊ.ಶುಭಾ ಬರವಾನಿ, ಪ್ರೊ.ಲಕ್ಷ್ಮಿ ಬುಂಗ್ರಿ, ಪ್ರೊ. ಸಿದ್ದಲಿಂಗಯ್ಯ ಎಂ.ಛತ್ರದಮಠ,ಪ್ರೊ.ಪ್ರಶಾಂತ ಪಾಟೀಲ ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT