ಸೋಮವಾರ, ಆಗಸ್ಟ್ 8, 2022
21 °C

ತುರ್ತು ಕೆಲಸಗಳಿಗೆ ತೆರಳಲು ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಸರ್ಕಾರಿ ಸಾರಿಗೆ ನೌಕರರು ಮುಷ್ಕರ ಮುಂದುವರಿಸಿರುವುದರಿಂದ ಪ್ರಯಾಣಿಕರು ಬಸ್ ನಿಲ್ದಾಣದತ್ತ ಬರುತ್ತಿಲ್ಲ. ಆದರೆ, ತುರ್ತು ಕೆಲಸಗಳಿಗೆ ಪ್ರಯಾಣ ಮಾಡಲೇಬೇಕಾದವರು ದುಬಾರಿಯಾದರೂ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ.

ಇಲ್ಲಿನ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಿಲ್ಲುತ್ತಿರುವ ಪ್ರಯಾಣಿಕರು, ಆ ಮಾರ್ಗದಲ್ಲಿ ಸಾಗುವ ಟ್ರಕ್, ಖಾಸಗಿ ಬಸ್ ಮೊದಲಾದ ವಾಹನಗಳ ಡ್ರಾಪ್ ಕೇಳುತ್ತಿದ್ದಾರೆ. ಈ ಅವಕಾಶ ಬಳಸಿಕೊಳ್ಳುತ್ತಿರುವ ಖಾಸಗಿ ವಾಹನಗಳವರು ಮೂರ್ನಾಲ್ಕು ಪಟ್ಟು ಹೆಚ್ಚಿನ ಹಣ ಪಡೆಯುತ್ತಿರುವುದು ಸಾಮಾನ್ಯವಾಗಿದೆ.

ನಗರದಲ್ಲಷ್ಟೇ ಓಡಾಡುತ್ತಿದ್ದ ಟಂಟಂಗಳು, ಆಟೊರಿಕ್ಷಾಗಳು ಮೊದಲಾದವು ತಾಲ್ಲೂಕಿನ ವಿವಿಧೆಡೆಗೂ ಸಂಚರಿಸುತ್ತಿವೆ. ಸಂಕೇಶ್ವರದವರೆಗೂ ಹೋಗುತ್ತಿವೆ. ಒಬ್ಬರಿಗೆ ₹ 200 ಪಡೆಯುತ್ತಿದ್ದಾರೆ. ತುರ್ತು ಕೆಲಸಗಳಿದ್ದವರು ಅನಿವಾರ್ಯವಾಗಿ ಈ ವಾಹನಗಳ ಮೊರೆ ಹೋಗುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು