‘ವೃಕ್ಷ ಪ್ರೇಮಿ‘ ಸಿದ್ದಣ್ಣ ದುರದುಂಡಿ

ಶನಿವಾರ, ಏಪ್ರಿಲ್ 20, 2019
27 °C
ಮೂಡಲಗಿ ತಾಲ್ಲೂಕು ಹಳ್ಳೂರದ ಯುವಕ

‘ವೃಕ್ಷ ಪ್ರೇಮಿ‘ ಸಿದ್ದಣ್ಣ ದುರದುಂಡಿ

Published:
Updated:
Prajavani

ಮೂಡಲಗಿ: ತಾಲ್ಲೂಕಿನ ಹಳ್ಳೂರಿನಲ್ಲಿ ಅರಣ್ಯ ಇಲಾಖೆ, ಗ್ರಾಮ ಪಂಚಾಯ್ತಿಯಿಂದ ನೆಟ್ಟಿರುವ ನೂರಾರು ಗಿಡಗಳಿಗೆ ಅದೇ ಗ್ರಾಮದ ಸಿದ್ದಣ್ಣ ದುರದುಂಡಿ ನೀರು ಹಾಕಿ ಬೆಳೆಸುವ ಮೂಲಕ ಎಲೆಮರೆಯ ಕಾಯಿಯಂತೆ ಪರಿಸರ ಕಾಳಜಿಯ ಕೆಲಸ ಮಾಡುತ್ತಿದ್ದಾರೆ. ವೃಕ್ಷಪ್ರೇಮಿ ಎನಿಸಿಕೊಂಡಿದ್ದಾರೆ.

ಗ್ರಾಮದ ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಸರ್ಕಾರಿ ಆಸ್ಪತ್ರೆ, ಬಿಸಿಎಂ ಹಾಸ್ಟೆಲ್ ಆವರಣ, ಸ್ಮಶಾನ ಹೀಗೆ... ಸಾರ್ವಜನಿಕ ಸ್ಥಳಗಳಲ್ಲಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸಸಿಗಳನ್ನು ನೆಡಲಾಗಿದೆ. ದ್ಯ ಅವುಗಳೆಲ್ಲ ಎತ್ತರವಾಗಿ ಬೆಳೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಜನರಿಗೆ, ವಿದ್ಯಾರ್ಥಿಗಳಿಗೆ ನೆರಳಿನ ಆಸರೆಯಾಗಿವೆ. ಬಾನಾಡಿಗಳಿಗೆ ವಿಶ್ರಮಿಸುವ ತಾಣವಾಗಿವೆ. ಇದರಲ್ಲಿ ಸಿದ್ದಣ್ಣ ಅವರ ‘ನೀರ ಸೇವೆ’ಯ ಪಾಲಿದೆ.

ಯುವ ಸಂಘಟನೆ, ಸಮಾಜಸೇವೆ, ಡೊಳ್ಳು ಕುಣಿತ ಪ್ರದರ್ಶನ ಮೊದಲಾದ ಚಟುವಟಿಕೆಗಳಲ್ಲಿ ಓಡಾಡಿಕೊಂಡಿರುವ ಸಿದ್ದಣ್ಣ ಅವರಿಗೆ ಗಿಡಗಳನ್ನು ಸಂರಕ್ಷಿಸುವ ಪ್ರೇರಣೆ ಆಗಿದ್ದು ಸಾಲುಮರದ ತಿಮ್ಮಕ್ಕನ ಯಶೋಗಾಥೆಯಿಂದಂತೆ. ‘5 ವರ್ಷಗಳಿಂದ ಅಲ್ಲಲ್ಲಿ ಸಸಿಗಳನ್ನು ನೆಟ್ಟು, ನೀರುಣಿಸುವ ಕಾಯಕ ಮಾಡುತ್ತಿದ್ದಾರೆ. ಬೇಸಿಗೆಯಲ್ಲಿ ಅವುಗಳು ಒಣಗಿ ಹಾಳಾಗಬಾರದು ಎಂದು ಸ್ವಯಂಪ್ರೇರಣೆಯಿಂದ ನೀರು ಹಾಕುತ್ತಿದ್ದೇನೆ’ ಎಂದು ಸಿದ್ದಣ್ಣ ತಮ್ಮಲ್ಲಿ ವೃಕ್ಷ ಪ್ರೇಮ ಹುಟ್ಟಿದ ಬಗೆಯನ್ನು ಹೇಳುತ್ತಾರೆ.

ಪ್ರತಿ ವರ್ಷ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯ್ತಿಯವರು ವಿವಿಧೆಡೆ ಖಾಲಿ ಜಾಗಗಳಲ್ಲಿ ಸಸಿಗಳನ್ನು ನೆಡುತ್ತಾರೆ. ಮುಂದೆ ಅವುಗಳಿಗೆ ನೀರುಣಿಸಲು ಪಂಚಾಯ್ತಿಯವರೊಂದಿಗೆ ಸಿದ್ದಣ್ಣ ಟೊಂಕಕಟ್ಟಿ ನಿಲ್ಲುತ್ತಾರೆ. ಪಂಚಾಯ್ತಿಯ ಟ್ಯಾಂಕರನ್ನು ಹಳ್ಳ, ಬಾವಿ, ಕೊಳವೆಬಾವಿಗೆ ಒಯ್ದು ನೀರು ತುಂಬಿಸಿಕೊಂಡು ಊರಲ್ಲಿಯ ಗಿಡಗಳಿಗೆ ಸರದಿಯಂತೆ ನೀರು ಹಾಕುತ್ತಾರೆ. ಅವರ ಸೇವೆಯನ್ನು ಕಂಡು ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಕೂಡ ನೀರು ಹಾಕಲು ಕೈಜೋಡಿಸುತ್ತಾರೆ. ಚಿಕ್ಕು, ಮಾವು, ಸೀತಾಫಲ, ರಾಮಫಲ ಹಣ್ಣಿನ ಗಿಡಗಳು ಕೂಡ ಇದ್ದು, ಅವು ಫಲ ನೀಡುತ್ತಿವೆ.

ವೃಕ್ಷ ಸಂರಕ್ಷಣೆ ಮತ್ತು ಶೌಚಾಲಯ ಜಾಗೃತಿ ಮೂಡಿಸುತ್ತಿರುವ ಅವರನ್ನು ಹಳ್ಳೂರ ಗ್ರಾಮ ಪಂಚಾಯ್ತಿಯವರು, ನೆಹರೂ ಯುವ ಕೇಂದ್ರದವರು ಸೇರಿದಂತೆ ಹಲವು ಸನ್ಮಾನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !