ಅಪಘಾತ: ಬೈಕ್, ಲಾರಿ ಬೆಂಕಿಗಾಹುತಿ, ಮೂವರು ಅಪಾಯದಿಂದ ಪಾರು

ಬುಧವಾರ, ಏಪ್ರಿಲ್ 24, 2019
23 °C

ಅಪಘಾತ: ಬೈಕ್, ಲಾರಿ ಬೆಂಕಿಗಾಹುತಿ, ಮೂವರು ಅಪಾಯದಿಂದ ಪಾರು

Published:
Updated:
Prajavani

ಬೆಳಗಾವಿ: ಇಲ್ಲಿನ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಮನಾಪುರ ಬಳಿ ಬುಧವಾರ ಮಧ್ಯಾಹ್ನ ನಡೆದ ಅಪಘಾತದಲ್ಲಿ ಲಾರಿ ಹಾಗೂ ಬೈಕ್ ಸಂಪೂರ್ಣ ಸುಟ್ಟು ಹೋಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.

‘ತಾಲ್ಲೂಕಿನ ಕಡೋಲಿಯ ಸುನೀಲ್ ಬಗರೆ, ವಿವೇಕ ಬಿರ್ಜೆ ಹಾಗೂ ರಿತೇಶ್ ಪರುಶುರಾಮ ಕಣಬರಗಿಯಿಂದ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದರು. ಎಪಿಎಂಸಿಯಲ್ಲಿ ಈರುಳ್ಳಿ ಇಳಿಸಿ, ಕೊಲ್ಹಾ‍ಪುರದ ಕಡೆಗೆ ಹೋಗುತ್ತಿದ್ದ ಲಾರಿಯು ದ್ವಿಚಕ್ರವಾಹನಕ್ಕೆ ತಾಕಿದೆ. ಆಗ, ಮೂವರೂ ಎಡಕ್ಕೆ ಬಿದ್ದಿದ್ದಾರೆ; ಬೈಕ್‌ ಲಾರಿ ಕೆಳಗಡೆಗೆ ಹೋಗಿದೆ. ನಂತರ ಬೈಕ್‌ನ ಟ್ಯಾಂಕ್‌ನಲ್ಲಿದ್ದ ಪೆಟ್ರೋಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಅದು ಲಾರಿಗೂ ವ್ಯಾಪಿಸಿದೆ ಎಂದು ಗೊತ್ತಾಗಿದೆ’ ಪೊಲೀಸರು ಮಾಹಿತಿ ನೀಡಿದರು.

ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇತರ ವಾಹನಗಳು ಸರ್ವಿಸ್‌ ರಸ್ತೆಯಲ್ಲಿ ಸಾಗಿದವು. ವಿಷಯ ತಿಳಿದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದರು.

ಗಾಯಗೊಂಡಿರುವ ಸುನೀಲ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !