ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಬಾವುಟ: ನಾಳೆ ಸಂಜೆಯಿಂದ ಟ್ವಿಟರ್ ಅಭಿಯಾನ

Last Updated 29 ಡಿಸೆಂಬರ್ 2020, 13:37 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಎದುರು ಕನ್ನಡಪರ ಹೋರಾಟಗಾರರು ಧ್ವಜಸ್ತಂಭ ಸ್ಥಾಪಿಸಿ ಕನ್ನಡ ಬಾವುಟ ಹಾರಿಸಿರುವುದಕ್ಕೆ ಬೆಂಬಲ ವ್ಯಕ್ತಪಡಿಸಿ ಬುಧವಾರ (ಡಿ.30) ದಿಂದ ಟ್ವಿಟರ್ ಅಭಿಯಾನ ನಡೆಸಲು ಇಲ್ಲಿನ ಯುವಕರು ಮುಂದಾಗಿದ್ದಾರೆ.

‘ಗಡಿ ನಾಡಿನಲ್ಲಿ ಕನ್ನಡಿಗರ ಹೋರಾಟಕ್ಕೆ ರಾಜ್ಯದಾದ್ಯಂತ ಬೆಂಬಲ ವ್ಯಕ್ತವಾಗಿದೆ. ಧ್ವಜ ತೆರವುಗೊಳಿಸದಂತೆ ಸಾಮಾಜಿಕ ಮಾಧ್ಯಮದಲ್ಲೂ ಹೋರಾಟ ಮುಂದುವರಿಸಬೇಕಿದೆ. ಹೀಗಾಗಿ, ಟ್ವಿಟರ್ ಬಳಸುವ ಕನ್ನಡ ಅಭಿಮಾನಿಗಳು #ನಮ್ಮಬೆಳಗಾವಿನಮ್ಮಬಾವುಟ ಅಥವಾ #OurBelagaviOurFlag ಎಂಬ ಹ್ಯಾಷ್‌ಟ್ಯಾಗ್ ಮೂಲಕ ಟ್ವೀಟ್ ಮಾಡಿ ಬೆಂಬಲಿಸಬೇಕು’ ಎಂದು ಜಿಲ್ಲಾ ಸಾಮಾಜಿಕ ಜಾಲತಾಣಗಳ ಒಕ್ಕೂಟ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT