ಬುಧವಾರ, ಫೆಬ್ರವರಿ 26, 2020
19 °C

ಇಬ್ಬರ ಬಂಧನ: 7 ದ್ವಿಚಕ್ರವಾಹನ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ವಾಹನಗಳ ಕಳವು ಆರೋಪದಲ್ಲಿ ಇಬ್ಬರನ್ನು ಬಂಧಿಸಿರುವ ಇಲ್ಲಿ ಇಲ್ಲಿನ ಗ್ರಾಮೀಣ ಠಾಣೆ ‍ಪೊಲೀಸರು, ಅವರಿಂದ ₹2.70 ಲಕ್ಷ ಮೌಲ್ಯದ ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ತಾಲ್ಲೂಕಿನ ಖಾದರವಾಡಿ ಆಜಾದ್ ನಗರದ ನಿವಾಸಿಗಳಾದ ಅಮ್ಜದ್ ವಲೀಸಾಬ ಸನದಿ ಹಾಗೂ ಪಹೀಮ್ ಸಿಕಂದರ್ ಕರವೇಶಕರ ಬಂಧಿತರು.

ಭಾನುವಾರ ದ್ವಿಚಕ್ರವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಪಿಎಸ್‌ಐ ಕೆ.ಸಿ. ಗುರ್ಲಹೊಸೂರ ಹಾಗೂ ಸಿಬ್ಬಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಅವರು ಕಳವು ಮಾಡಿರುವುದು ಗೊತ್ತಾಗಿದೆ. ಇಬ್ಬರೂ ಕೂಡಿಕೊಂಡು ನಗರ ಹಾಗೂ ಸುತ್ತಮುತ್ತಲಿನ ವಿವಿಧೆಡೆ ಏಳು ದ್ವಿಚಕ್ರವಾಹನಗಳನ್ನು ಕಳವು ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು