ಗುರುವಾರ , ನವೆಂಬರ್ 21, 2019
20 °C

ಮುಳುಗುತ್ತಿರುವ ಮಗು ಕಾಪಾಡಲು ಹೋದ ವ್ಯಕ್ತಿಯೂ ಸಾವು 

Published:
Updated:

ಅಥಣಿ: ತಾಲ್ಲೂಕಿನ ಕೊಕಟನೂರ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋದ ವ್ಯಕ್ತಿಯೂ ಸೇರಿದಂತೆ ಶುಕ್ರವಾರ ಇಬ್ಬರು ಸಾವಿಗೀಡಾದರು.

ಈಜು ಕಲಿಯಲು ಹೊಲದ ಮಾಲೀಕರ ಮಗ ಅಭಿಷೇಕ ಅವಟಿ (9) ಹದಿನೈದು ಅಡಿಗಿಂತಲೂ ಹೆಚ್ಚು ಆಳವಿದ್ದ ಹೊಂಡದಲ್ಲಿ ಇಳಿದಿದ್ದ. ಅದೇ ಹೊಲದಲ್ಲಿ ಕಾರ್ಮಿಕನಾಗಿದ್ದ ಬೀರಪ್ಪ ಕಡೋಲ್ಕರ್‌ (42), ಮುಳುಗುತ್ತಿದ್ದ ಅಭಿಷೇಕನನ್ನು ಮೇಲಕ್ಕೆತ್ತಲು ಹೊಂಡಕ್ಕೆ ಇಳಿದಿದ್ದರು. ಆಯತಪ್ಪಿದ ಇಬ್ಬರೂ ಹೊಂಡದಲ್ಲಿ ಮುಳುಗಿ ಸಾವಿಗೀಡಾದರು.

ಐಗಳಿ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)