ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲಿ ಕಳವು: ಇಬ್ಬರ ಬಂಧನ

Last Updated 22 ಅಕ್ಟೋಬರ್ 2020, 15:53 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಮುತಗಾ ಗ್ರಾಮದ ಶ್ರೀರಾಮ ಕಾಲೊನಿಯ ದೀಪಕ ಹಡಪದ ಎನ್ನುವವರ ಮನೆಯಲ್ಲಿ ನಡೆದಿದ್ದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಮಾರಿಹಾಳ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ.

ಇಲ್ಲಿನ ಅನಗೋಳದ ಜಟಪಟ ಕಾಲೊನಿಯ ವೈಭವ ಮಹಾದೇವ ಸಳಕೆ (21) ಹಾಗೂ ರಿಯಾನ ಶೇಖ (21) ಬಂಧಿತರು. ಅವರಿಂದ ಚಿನ್ನಾಭರಣಗಳು, ಆರು ದ್ವಿಚಕ್ರವಾಹನ, ಲ್ಯಾಪ್‌ಟಾಪ್, ಟಿವಿ, ಮೊಬೈಲ್ ಫೋನ್‌, ಸಿಲಿಂಡರ್ ಸೇರಿ ಒಟ್ಟು ₹ 3.71 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT