ಸೋಮವಾರ, ನವೆಂಬರ್ 18, 2019
20 °C

ಗಾಳಿಪಟ ದಾರಕ್ಕೆ ಸಿಲುಕಿ ಬಿದ್ದು ಇಬ್ಬರಿಗೆ ಗಾಯ

Published:
Updated:

ಬೆಳಗಾವಿ: ಇಲ್ಲಿನ ಗಾಂಧಿನಗರ ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ–4ರಲ್ಲಿ ದ್ವಿಚಕ್ರವಾಹನದಲ್ಲಿ ಹೋಗುವಾಗ ಗಾಳಿಪಟ ಹಾರಿಸಲು ಬಳಸುವ ಮಾಂಜಾ ದಾರ ಸಿಲುಕಿದ್ದರಿಂದ ಇಬ್ಬರು ಗಾಯಗೊಂಡಿದ್ದಾರೆ.

ತಾಲ್ಲೂಕಿನ ಕೊಂಡಸಕೊಪ್ಪ ಗ್ರಾಮದ ನಿವಾಸಿಗಳಾದ ಸುರೇಶ ಕಂಠೆಣ್ಣವರ (20) ಹಾಗೂ ಮಂಗಲ್ ಪಾಟೀಲ (10) ಗಾಯಗೊಂಡವರು. ಕಂಗ್ರಾಳಿಯಲ್ಲಿ ಸಂಬಂಧಿಕರ ಮನೆಗೆ ಹೋಗಿದ್ದ ಅವರು ವಾಪಸಾಗುವಾಗ, ದಾರ ಸಿಲುಕಿದ್ದರಿಂದ ದ್ವಿಚಕ್ರವಾಹನದಿಂದ ಬಿದ್ದಿದ್ದಾರೆ. ಮುಖ, ಕುತ್ತಿಗೆ, ಕೈಕಾಲಿಗೆ ಗಾಯವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ನಿಷೇಧದ ನಡುವೆಯೂ ಮಾಂಜಾ ದಾರ ಬಳಸುವುದು ಕಂಡುಬರುತ್ತಿದೆ. ಹೋದ ವರ್ಷವೂ ಮೂರ್ನಾಲ್ಕು ಮಂದಿ ಗಾಯಗೊಂಡ ಪ್ರಕರಣಗಳು ನಡೆದಿದ್ದವು.

ಪ್ರತಿಕ್ರಿಯಿಸಿ (+)