ಮಂಗಳವಾರ, ಆಗಸ್ಟ್ 20, 2019
25 °C

ಪುನರ್ವಸತಿ ಮೇಲುಸ್ತುವಾರಿಗೆ ಇಬ್ಬರು ಹೆಚ್ಚುವರಿ ಜಿಲ್ಲಾಧಿಕಾರಿಗಳು

Published:
Updated:

ಬೆಳಗಾವಿ: ನೆರೆ ಹಾವಳಿಗೆ ತುತ್ತಾಗಿರುವ ಜಿಲ್ಲೆಯಲ್ಲಿ ಪುನರ್ವಸತಿ ಹಾಗೂ ಪರಿಹಾರ ಕಾರ್ಯಗಳ ಮೇಲುಸ್ತುವಾರಿಗಾಗಿ ಕೆಎಎಸ್‌ ಹಿರಿಯ ಮತ್ತು ಕಿರಿಯ ಶ್ರೇಣಿಯ ಇಬ್ಬರು ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಿದೆ.

ಇವರಿಗಾಗಿ ಹೆಚ್ಚುವರಿ ಜಿಲ್ಲಾಧಿಕಾರಿಗಳನ್ನು ತಾತ್ಕಾಲಿಕವಾಗಿ 6 ತಿಂಗಳ ಅವಧಿಯವರೆಗೆ ಹೆಚ್ಚುವರಿಯಾಗಿ ಸೃಜಿಸಿ ಸರ್ಕಾರ ಆದೇಶ ಹೊರಡಿಸಿದೆ.

ಸ್ಥಳ ನಿರೀಕ್ಷೆಯಲ್ಲಿದ್ದ ಪ್ರಭುಲಿಂಗ ಕವಳಿಕಟ್ಟಿ (ಎಡಿಸಿ ಪುನರ್ವಸತಿ–1– ಬೆಳಗಾವಿ ಜಿಲ್ಲೆ) ಹಾಗೂ ಬಾಗಲಕೋಟೆಯಲ್ಲಿ ಮಲಪ್ರಭಾ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದ ಜಿ.ಟಿ. ದಿನೇಶ್‌ಕುಮಾರ್ (ಎಡಿಸಿ ಪುನರ್ವಸತಿ–2– ಚಿಕ್ಕೋಡಿ ತಾಲ್ಲೂಕು) ಅವರನ್ನು ವರ್ಗಾಯಿಸಿ ನೇಮಿಸಲಾಗಿದೆ. ತಕ್ಷಣ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

Post Comments (+)