ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಗಮನನ್ನು ಪೂಜ್ಯನೀಯವಾಗಿ ಕಾಣಿರಿ: ಡಾ.ಅಲ್ಲಮಪ್ರಭು ಸ್ವಾಮೀಜಿ

Last Updated 14 ಜುಲೈ 2021, 12:29 IST
ಅಕ್ಷರ ಗಾತ್ರ

ಮರಕ್ಕೆ ಬಾಯಿ ಬೇರೆಂದು ತಳಕ್ಕೆ ನೀರನೆರೆದಡೆ

ಮೇಲೆ ಪಲ್ಲವಿಸಿತ್ತು ನೋಡಾ!

ಲಿಂಗದ ಬಾಯಿ ಜಂಗಮವೆಂದು ಪಡಿಪದಾರ್ಥವ ನೀಡಿದಡೆ

ಮುಂದೆ ಸಕಳಾರ್ಥವನೀವನು.

ಆ ಜಂಗಮವ ಹರನೆಂದು ಕಂಡು ನರನೆಂದು ಭಾವಿಸಿದಡೆ

ನರಕ ತಪ್ಪದು, ಕಾಣಾ, ಕೂಡಲಸಂಗಮದೇವಾ.

ನಾವು ಮಾಡುವ ಪೂಜೆ-ಪುನಸ್ಕಾರಗಳು ಭಕ್ತಿ, ಶ್ರದ್ಧೆ, ನಿಸ್ವಾರ್ಥಗಳಿಂದ ಕೂಡಿರಬೇಕು. ನಿಷ್ಠೆಯ ಪೂಜೆ ನಮ್ಮದಾಗಿರಬೇಕು. ಮರದ ಬುಡಕ್ಕೆ ನೀರನ್ನು ಹಾಕಿದಾಗ ಯಾವ ರೀತಿಯಾಗಿ ಅದು ಫಲವನ್ನು ಕೋಡುತ್ತದೆಯೋ ಅದೇ ರೀತಿಯಾಗಿ ನಾವು ಪೂಜಿಸುವ ಆ ಭಗವಂತನ ಸ್ವರೂಪ ಜಂಗಮ ಮೂರ್ತಿಯಾಗಿದ್ದಾನೆ. ಸಕಲ ಜೀವಾತ್ಮರಿಗೆ ಲೇಸು ಬಯಸುವವ, ಯಾವುದೇ ಕುಲಕ್ಕೆ ಸೀಮಿತವಲ್ಲದ ಚರಾಚರವನ್ನೊಳಗೊಂಡ ನಿರಂಜನ ಮೂರ್ತಿಯೇ ಜಂಗಮನಾಗಿದ್ದಾನೆ. ಅಂತಹ ಜಂಗಮನಿಗೆ ನಾವು ನಿಜವಾದ ಭಕ್ತಿಯನ್ನು ಸಮರ್ಪಿಸಬೇಕು. ಆಗ ನಾವು ಬೇಡಿದ ಫಲಗಳೆಲ್ಲವೂ ದೊರೆಯುತ್ತವೆ. ನಮ್ಮ ಜೀವನವು ಸಾರ್ಥಕವಾಗುತ್ತದೆ. ಜಂಗಮನನ್ನು ಪೂಜ್ಯನೀಯವಾಗಿ ಕಾಣದೆ ಸಾಮಾನ್ಯನೆಂದು ಭಾವಿಸಿದರೆ ನಮಗೆ ಕಷ್ಟಗಳು ತಪ್ಪಿದ್ದಲ್ಲ ಎನ್ನುವುದು ಈ ವಚನದ ಸಾರವಾಗಿದೆ.

-ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT