ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಿನ ಮಾತು ನಿತ್ಯವೂ ಆಲಿಸೋಣ: ಡಾ.ಅಲ್ಲಮಪ್ರಭು ಸ್ವಾಮೀಜಿ

Last Updated 23 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಗುರು ವಚನವಲ್ಲದೆ ಲಿಂಗವೆಂದೆನಿಸದು

ಗುರು ವಚನವಲ್ಲದೆ ನಿತ್ಯವೆಂದೆನಿಸದು

ಗುರು ವಚನವಲ್ಲದೆ ನೇಮವೆಂದೆನಿಸದು.

ತಲೆಯಿಲ್ಲದ ಅಟ್ಟೆಗೆ ಪಟ್ಟವ ಕಟ್ಟುವ

ಉಭಯ ಭ್ರಷ್ಟರ ಮೆಚ್ಚುವನೆ,

ನಮ್ಮ ಕೂಡಲಸಂಗಮದೇವ?

ಮನುಷ್ಯನ ಜೀವನದಲ್ಲಿ ಗುರುವಿನ ಪಾತ್ರವು ಬಹಳ ಮುಖ್ಯವಾದುದಾಗಿದೆ. ಪ್ರತಿಯೊಂದು ಹಂತದಲ್ಲಿಯೂ ಗುರುವಿನ ಮಾರ್ಗದರ್ಶನ ಇಲ್ಲದೆ ಯಾವುದೂ ಸಾಧ್ಯವಿಲ್ಲ. ನಾವು ಸರಿಯಾದ ಮಾರ್ಗದಲ್ಲಿ ಸಾಗಬೇಕಾದರೆ, ನಮ್ಮ ಜೀವನವು ಸುಖಮಯವಾಗಬೇಕಾದರೆ ಗುರುವಿನ ಮಾರ್ಗದರ್ಶನ ಅತ್ಯವಶ್ಯವಾಗಿದೆ. ಗುರುಗಳಿಂದ ನಾವು ಲಿಂಗದೀಕ್ಷೆಯನ್ನು ಹೊಂದಿದರೆ ಸರಿಯಾದ ರೀತಿಯಿಂದ ಸಾಧನೆಯಾಗುತ್ತದೆ. ಗುರುವಿನ ಮಾತುಗಳನ್ನು ನಿತ್ಯವೂ ಆಲಿಸುವುದರಿಂದ ನಮ್ಮ ಜೀವನ ಶಾಂತಿಯಿಂದ ಸಾಗಿಸಬಹುದು. ನಮ್ಮ ನಿತ್ಯ ಕಾಯಕ– ದಾಸೋಹಗಳು ಕೂಡ ಗುರುವಿನ ಮಾರ್ಗದರ್ಶನದಿಂದ ಸರಿಯಾದ ದಿಕ್ಕಿನಲ್ಲಿ ಸಾಗುತ್ತವೆ. ಯಾವುದೇ ಅನುಭವ ಇರದ ಗುರುತ್ವದ ಮಹತ್ವವು ಗೊತ್ತಿರದ ವ್ಯಕ್ತಿಯು ಹಾಗೂ ಭವಿಯಾದವನು– ಇಬ್ಬರೂ ಅನನುಭವಿಗಳು (ಉಭಯ ಭ್ರಷ್ಟರು). ಇಂಥವರನ್ನು ಭಗವಂತನು ಮೆಚ್ಚುವುದಿಲ್ಲ ಎನ್ನುವುದು ಈ ಮೇಲಿನ ವಚನದ ತಾತ್ಪರ್ಯವಾಗಿದೆ. ಗುರುವಿನ ಮಾತು ನಿತ್ಯವೂ ಆಲಿಸೋಣ; ಅವರ ಮಾರ್ಗದರ್ಶನದಲ್ಲಿ ಸಾಗೋಣ.

-ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT