ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ: ದೇವರ ನಾಮಸ್ಮರಣೆ ಬಿಡಬಾರದು

Last Updated 23 ಡಿಸೆಂಬರ್ 2020, 6:06 IST
ಅಕ್ಷರ ಗಾತ್ರ

ಕರಿ ಘನ: ಅಂಕುಶ ಕಿರಿದೆನ್ನಬಹುದೆ? ಬಾರದಯ್ಯ

ಗಿರಿ ಘನ: ವಜ್ರ ಕಿರಿದೆನ್ನಬಹುದೆ? ಬಾರದಯ್ಯ

ತಮಂಧ ಘನ: ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯ

ಮರಹು ಘನ: ನಿಮ್ಮ ನೆನೆವ ಮನ ಕಿರಿದೆನ್ನಬಹುದೆ? ಬಾರದಯ್ಯ ಕೂಡಲಸಂಗಮ ದೇವಾ.

ಮಾನವನು ತನ್ನಲ್ಲಿರುವ ಅಜ್ಞಾನದಿಂದ ಭಗವಂತನ ನಾಮಸ್ಮರಣೆಯನ್ನು ಮರೆಯುತ್ತಾನೆ. ಸಂಸಾರದ ಜಂಜಡದಲ್ಲಿ ಮುಳುಗಿರುವ ಆತನು ಭಗವಂತನ ಕುರಿತು ಚಿಂತಿಸದೆ, ತನ್ನದೆಯಾದ ಸಂಸಾರದ ಬಲೆಯಲ್ಲಿ ಬಿದ್ದಿರುವನು. ಅದಕ್ಕೆ ಬಸವಣ್ಣ ಅವರು ಮನಸ್ಸು ಸದಾಕಾಲ ಭಗವಂತನ ಸ್ಮರಣೆಯಲ್ಲಿರಬೇಕು ಎನ್ನುವುದನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ. ಆನೆಯು ಎಲ್ಲ ಪ್ರಾಣಿಗಳಲ್ಲಿಯೆ ದೊಡ್ಡದಾದುದು ಅದು ಚಿಕ್ಕದಾದ ಅಂಕುಶಕ್ಕೆ ಮಾತ್ರ ಬಾಗುತ್ತದೆ. ಗುಡ್ಡ, ಬೆಟ್ಟಗಳು ದೊಡ್ಡವಾದರೂ ಅವುಗಳನ್ನು ಕತ್ತರಿಸುವ ಸಾಧನ ಮಾತ್ರ ಚಿಕ್ಕದಾದ ವಜ್ರ. ಕತ್ತಲೆಯೂ ಅಗಾಧವಾದರೂ ಅದನ್ನು ಕಿರಿದಾದ ಜ್ಯೋತಿಯಿಂದ ಹೋಗಲಾಡಿಸುವಂತೆ, ಮಾನವನ ಮರೆವಿನ ಸ್ವಭಾವ ಎಷ್ಟೇ ದೀರ್ಘವಾದರೂ ಭಗವಂತನ ನೆನೆಯುವ ಮನಸ್ಸು ಕೂಡ ಚಿಕ್ಕದಲ್ಲ ಎನ್ನುವುದನ್ನು ಈ ವಚನದ ಮೂಲಕ ತಿಳಿಸಿದ್ದಾರೆ.

–ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT