ಬುಧವಾರ, ಜುಲೈ 28, 2021
22 °C

ಬಿಜೆಪಿ ಕುಡಚಿ ಮಂಡಲದಿಂದ ವನಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಗಳಖೋಡ: ಬಿಜೆಪಿ ಯುವ ಮೋರ್ಚಾ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಸಮೀಪದ ಖಣದಾಳ ಗ್ರಾಮದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಐದು ದಿನಗಳಿಂದ 850 ಸಸಿಗಳನ್ನು ನೆಟ್ಟರು. ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕರಾಗಿ 32 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಲಕ್ಕಪ್ಪ ಚಿಗರಿ ಅವರನ್ನು ಸನ್ಮಾನಿಸಿದರು.

ಬಿಜೆಪಿ ಚಿಕ್ಕೊಡಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಮೇಶ ಖೇತಗೌಡರ, ಯುವ ಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ಈರಣ್ಣ ಅಂಗಡಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಖಾನಗೌಡ, ಮುಖಂಡರಾದ ರಮೇಶ ಕಾಳನ್ನವರ, ಬಸವರಾಜ ಹಂಜಿ, ಬಸವರಾಜ ಹಾಲಳ್ಳಿ, ರಾಮಗೊಂಡ ಪಾಟೀಲ, ಶೇಖರ ಪಾಟೀಲ, ಸಚಿನ ಪ್ರಧಾನಿ, ಪುಂಡಲೀಕ ಕುರಬೇಟ, ಪಿ.ಜಿ. ಪಾಟೀಲ, ಲಕ್ಷ್ಮಣ ಹುಣಶ್ಯಾಳ, ಶ್ರೀಶೈಲ ಮಾಂಗ , ಸಂತೋಷ ಬಡಶೆಟ್ಟಿ, ಎಸ್.ಕೆ. ಪಾಟೀಲ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು