ಮಂಗಳವಾರ, ನವೆಂಬರ್ 12, 2019
28 °C

ಹತ್ಯೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Published:
Updated:
Prajavani

ಬೆಳಗಾವಿ: ಪಶ್ಚಿಮ ಬಂಗಾಳದಲ್ಲಿ ಹಿಂದೂ ಕುಟುಂಬದವರನ್ನು ಹತ್ಯೆ ಮಾಡಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಕಾರ್ಯಕರ್ತರು ಶುಕ್ರವಾರ ಪತ್ರಿಭಟನೆ ನಡೆಸಿದರು.

ರಾಣಿ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದವರೆಗೆ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

‘ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಾರ್ಯಕರ್ತ ಬಂಡು ಪ್ರಕಾಶ ಪಾಲ ಹಾಗೂ ಆತನ ಕುಟುಂಬದ ಇಬ್ಬರನ್ನು ಹತ್ಯೆ ಮಾಡಲಾಗಿದೆ. ಈ ಕೊಲೆ ಪ್ರಕರಣದಿಂದ ಜನರಲ್ಲಿ ಆಂತಕ ಹೆಚ್ಚುತ್ತಿದೆ. ಬಂಗಾಳದಲ್ಲಿ ಹಿಂದೂಗಳ ನಿರಂತರವಾಗಿ ದೌಜನ್ಯ ನಡೆಯುತ್ತಿದೆ. ಇದನ್ನು ತಡೆಯುವಲ್ಲಿ ಆ ಸರ್ಕಾರ ವಿಫಲವಾಗಿದೆ’ ಎಂದು ದೂರಿದರು.

‘ಪ.ಬಂಗಾಳ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ತರಬೇಕು. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಎನ್‌ಆರ್‌ಸಿ ಜಾರಿಗೊಳಿಸುವ ಮೂಲಕ ಬಾಂಗ್ಲಾದೇಶದ ಮುಸ್ಲಿಮರನ್ನು ಮರಳಿ‌ ಕಳುಹಿಸಬೇಕು. ನಾಗರಿಕ ಕಾಯ್ದೆ ಜಾರಿಗೊಳಿಸಿ ಬಾಂಗ್ಲಾದೇಶದಲ್ಲಿ ನೆಲೆಸಿರುವ ಹಿಂದೂಗಳಿಗೆ ಭಾರತೀಯ ನಾಗರಿಕತೆ ಕೊಟ್ಟು ಸಂರಕ್ಷಿಸಬೇಕು’ ಎಂದು ಒತ್ತಾಯಿಸಿದರು.

ಕಾರ್ಯಕರ್ತರಾದ ಬಾವುಕಣ ಲೋಹಾರ, ಕೃಷ್ಣ ಭಟ್, ಶ್ರೀಕಾಂತ ಕದಂಬ, ಹೇಮಂತ ಹವಳ, ಆದಿತ್ಯನಾಥ ಗಾವಡೆ ಇದ್ದರು.

ಪ್ರತಿಕ್ರಿಯಿಸಿ (+)