ಸೋಮವಾರ, ಆಗಸ್ಟ್ 19, 2019
28 °C

ಸಂತ್ರಸ್ತರಿಗೆ ಉ.ಕ. ಟ್ರಸ್ಟ್ ಸದಸ್ಯರ ನೆರವು

Published:
Updated:
Prajavani

ಅಥಣಿ: ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಈ ಭಾಗದ ಜನರು ಸ್ಥಾಪಿಸಿರುವ ಉತ್ತರ ಕರ್ನಾಟಕ ಗೆಳೆಯರ ಚಾರಟಬಲ್‌ ಟ್ರಸ್ಟ್‌ ಸದಸ್ಯರು ಅಥಣಿ ತಾಲ್ಲೂಕಿನ ವಿವಿಧ ಗ್ರಾಮಗಳ ಸಂತ್ರಸ್ತರಿಗೆ ಬುಧವಾರ ದಿನಬಳಕೆಯ ವಸ್ತುಗಳನ್ನು ವಿತರಿಸಿದರು. 

ಟ್ರಸ್ಟ್‌ನ ಸದಸ್ಯ ಶಂಕರ ಕಾಮಣ್ಣ ಮಾತನಾಡಿ, ‘ಟ್ರಸ್ಟ್‌ ಸದಸ್ಯರ ಒಂದು ತಿಂಗಳ ವೇತನವನ್ನು ಸಂಗ್ರಹಿಸಿ ಪ್ರವಾಹ ಸಂತ್ರಸ್ತರಿಗೆ ನೆರವು ಕಲ್ಪಿಸುತ್ತಿದ್ದೇವೆ. 10 ಲಾರಿಗಳಲ್ಲಿ ಆಹಾರ ಪದಾರ್ಥ ಹಾಗೂ ಇನ್ನಿತರ ದಿನಬಳಕೆಯ ವಸ್ತುಗಳನ್ನು ತುಂಬಿಕೊಂಡು ಒಂದು ವಾರದಿಂದ ವಿವಿಧ ಜಿಲ್ಲೆಯ ಸಂತ್ರಸ್ತರಿಗೆ ಅವುಗಳನ್ನು ತಲುಪಿಸುತ್ತಿದ್ದೇವೆ’ ಎಂದು ತಿಳಿಸಿದರು. 

ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದ ಸವದಿ ಮಾತನಾಡಿ, ಟ್ರಸ್ಟ್‌ನ ಸದಸ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 
ವಕೀಲ ಅಮೋಘ ಕೊಬರಿ, ಅಮರ ದುರ್ಗಣ್ಣವರ, ಬಸವರಾಜ ಸಿಂದಗಿ, ದೀಪಕ ಸಾಳವೆ, ವಿಜಯಕುಮಾರ ತೇರದಾಳ, ಪ್ರವೀಣ ದುರ್ಗಣ್ಣವರ, ಪ್ರಬಾಕರ ಲಾಡರ ಇದ್ದರು.

Post Comments (+)