ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್ ಚುನಾವಣೆ | ಕವಟಗಿಮಠಗಿಂತಲೂ ಪತ್ನಿ ಶ್ರೀಮಂತೆ, ಸಾಲವೂ‌ ಜಾಸ್ತಿ!

Last Updated 23 ನವೆಂಬರ್ 2021, 21:39 IST
ಅಕ್ಷರ ಗಾತ್ರ

ಬೆಳಗಾವಿ: ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಹಾಂತೇಶ ಕವಟಗಿಮಠ ₹ 2.31 ಕೋಟಿ ಚರಾಸ್ತಿ ಮತ್ತು ₹ 3.49 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

56 ವರ್ಷದ ಅವರು, ನಾಮಪತ್ರದೊಂದಿಗೆ ಆಸ್ತಿ ವಿವರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ.

ಕವಟಗಿಮಠ ಅವರಿಗಿಂತ ಪತ್ನಿ ರಾಜೇಶ್ವರಿ ಹೆಚ್ಚು ಶ್ರೀಮಂತೆ. ಅವರು ₹ 3.90 ಕೋಟಿ ಚರಾಸ್ತಿ ಮತ್ತು ₹ 6.56 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅದೇ ರೀತಿ ಹೆಚ್ಚಿನ ಸಾಲದ ಹೊಣೆಗಾರಿಕೆಯೂ ಅವರ ಮೇಲಿದೆ.

ಮಹಾಂತೇಶ ಅವರ ಬಳಿ ₹ 3 ಲಕ್ಷ ನಗದು ಇದೆ. ₹ 29.99 ಲಕ್ಷ ಉಳಿತಾಯ ಖಾತೆಯಲ್ಲಿದೆ. ₹ 13.50 ಲಕ್ಷ ಠೇವಣಿ ಇಟ್ಟಿದ್ದಾರೆ. ವಿವಿಧೆಡೆ ₹ 1.68 ಲಕ್ಷ ಮೌಲ್ಯದ ಷೇರಿದೆ. ಪತ್ನಿ ರಾಜೇಶ್ವರಿ ಬಳಿ ₹ 5 ಲಕ್ಷ ಇದೆ ಎಂದು ತಿಳಿಸಿದ್ದಾರೆ.

₹ 51.10 ಲಕ್ಷ ಮೌಲ್ಯದ ಎರಡು ಕಾರ್‌ಗಳಿವೆ. ಪತ್ನಿ ಹೆಸರಿನಲ್ಲಿ ₹ 2.62 ಕೋಟಿ ಮೌಲ್ಯದ ವಿವಿಧ ಕಾರ್‌ಗಳಿವೆ.

₹ 27.41 ಲಕ್ಷ ಮೌಲ್ಯದ ಆಭರಣ ಹೊಂದಿದ್ದಾರೆ. ಪತ್ನಿ ಬಳಿ ₹ 45.83 ಲಕ್ಷ ಮೌಲ್ಯದ ಆಭರಣಗಳಿವೆ.

ಕವಟಗಿಮಠದ ಅವರಿಗೆ ₹ 27 ಲಕ್ಷ ಸಾಲವಿದ್ದರೆ, ಪತ್ನಿ ಹೆಸರಿನಲ್ಲಿರುವುದು ₹ 4.60 ಕೋಟಿ ಸಾಲ. ಪುತ್ರಿ ಸುಷ್ಮಿತಾ ₹ 3.17 ಲಕ್ಷ ಹಾಗೂ ಪುತ್ರ ಶರದ ₹ 2.15 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ.

ಪಿಯುಸಿ ವಿದ್ಯಾರ್ಹತೆಯ ಕವಟಗಿಮಠ ಕೃಷಿ ಮತ್ತು ಸಮಾಜಸೇವೆ ತಮ್ಮ ವೃತ್ತಿ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT