ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೈಲಹೊಂಗಲ | ಅನಾಥ ಶವ ಅಂತ್ಯಕ್ರಿಯೆ: ಮಾನವೀಯತೆ ಮೆರೆದ ಯುವಕರು

Published : 29 ಆಗಸ್ಟ್ 2024, 7:09 IST
Last Updated : 29 ಆಗಸ್ಟ್ 2024, 7:09 IST
ಫಾಲೋ ಮಾಡಿ
Comments

ಬೈಲಹೊಂಗಲ: ಪಟ್ಟಣದಲ್ಲಿ ವಾಸುದೇವ ಮುದ್ದಪ್ಪ ಬಂಗೇರ ಎಂಬ ಅನಾಥ ವ್ಯಕ್ತಿಯ ಶವದ ಅಂತ್ಯಕ್ರಿಯೆ ಮಾಡಿ ಯುವಕರು ಮಾನವೀಯತೆ ಮೆರೆದಿದ್ದಾರೆ.

ಧಾರವಾಡ ಬೈಪಾಸ್ ರಸ್ತೆಯ ಅಮಟೂರ ಬಾಳಪ್ಪ ಮಹಾದ್ವಾರ ಹತ್ತಿರ ಕಳೆದ ತಿಂಗಳು ಹಿಂದೆ ಕಾಲಿಗೆ ಗಾಯ ಮಾಡಿಕೊಂಡು ನೆರಳಾಡುತ್ತಿದ್ದ ಮುದ್ದಪ್ಪ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಲಕಾರಿಯಾಗದೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೃತ ದೇಹವನ್ನು ಬಸವೇಶ್ವರ ಆಶ್ರಯ ನಗರದಲ್ಲಿರುವ ಸಂಸ್ಕೃತಿ ಪೌಂಡೇಷನ ವತಿಯಿಂದ ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ ನೇತೃತ್ವದಲ್ಲಿ ಯುವಕರು ಸಕಲ ವಿಧಿ, ವಿಧಾನಗಳೊಂದಿಗೆ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಸಮಾಜ ಸೇವಕರಾದ ರಫೀಕ ಬಡೇಘರ, ಗಣೇಶ ರೋಕಡೆ, ರಾಜು ಬೋಳಣ್ಣವರ, ಶಿವಾನಂದ ಕುರುಬೇಟ, ಅನಿಲ ತೋಟಗಿ, ಆನಂದ ಪಾಟೀಲ, ಮಹಾಂತೇಶ ಗುದಗೊಪ್ಪಗೋಳ, ಅಭಿಷೇಕ ಹಡಪದ, ಫಾರೂಕ ಅಂಕಲಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT