15ರಂದು ರಾಷ್ಟ್ರಪತಿ ಸೇರಿ ಗಣ್ಯರ ಭೇಟಿ; ಬಸ್‌ ಸಂಚಾರ ಅಸ್ತವ್ಯಸ್ಥ ಸಾಧ್ಯತೆ?

7

15ರಂದು ರಾಷ್ಟ್ರಪತಿ ಸೇರಿ ಗಣ್ಯರ ಭೇಟಿ; ಬಸ್‌ ಸಂಚಾರ ಅಸ್ತವ್ಯಸ್ಥ ಸಾಧ್ಯತೆ?

Published:
Updated:
Deccan Herald

ಬೆಳಗಾವಿ: ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಸೇರಿದಂತೆ ಹಲವು ಗಣ್ಯರು ಶನಿವಾರ ನಗರಕ್ಕೆ ಭೇಟಿ ನೀಡಲಿದ್ದಾರೆ. ಅವರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಶಿಷ್ಟಾಚಾರದ ಅಂಗವಾಗಿ ಹಲವು ಪ್ರದೇಶಗಳಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ನಗರ ಪೊಲೀಸ್‌ ಆಯುಕ್ತ ಡಿ.ಸಿ. ರಾಜಪ್ಪ ಆದೇಶ ಹೊರಡಿಸಿದ್ದಾರೆ.

ಅವರ ಆದೇಶದ ಪರಿಣಾಮವು ಬಸ್‌ ಸಂಚಾರದ ಮೇಲೂ ಉಂಟಾಗಲಿದೆ. ಪರ ಊರುಗಳಿಂದ ಬರುವ ಬಸ್‌ಗಳು ನಗರದೊಳಗೆ ಪ್ರವೇಶಿಸುವುದಿಲ್ಲ. ನಗರದ ವಿವಿಧ ದಿಕ್ಕುಗಳಲ್ಲಿ ತಾತ್ಕಾಲಿಕ ಸ್ಥಳಾವಕಾಶ ಕಲ್ಪಿಸಲಾಗಿದೆ. ಅಲ್ಲಿಂದಲೇ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಇಲ್ಲಿನ ಕೇಂದ್ರೀಯ ಬಸ್‌ ನಿಲ್ದಾಣವು ಹಾಗೂ ನಗರ ಸಾರಿಗೆ ಬಸ್‌ ನಿಲ್ದಾಣವು ಬೆಳಿಗ್ಗೆ 8 ಗಂಟೆಯಿಂದ ಸಂಜೆಯವರೆಗೆ ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ತುರ್ತು ಕಾರ್ಯಗಳು ಇಲ್ಲದಿದ್ದರೆ ನಗರಕ್ಕೆ ಬರುವುದನ್ನು ಸಾರ್ವಜನಿಕರು ಒಂದು ದಿನದ ಮಟ್ಟಿಗೆ ಮುಂದೂಡಬಹುದು.

ನಾಲ್ಕು ಕಡೆ ಬಸ್‌ ನಿಲ್ದಾಣ

ಖಾನಾಪುರ ಕಡೆಯಿಂದ ಬರುವ ಬಸ್‌ಗಳು ಪೀರಣವಾಡಿಯವರೆಗೆ ಮಾತ್ರ ಬರಲಿವೆ. ನಂತರ ಅಲ್ಲಿಂದಲೇ ವಾಪಸ್‌ ಹೋಗುವವು. ಹಿರೇಬಾಗೇವಾಡಿ ಕಡೆಯಿಂದ ಬರುವ ಬಸ್‌ಗಳು ಅಶೋಕ ನಗರದಲ್ಲಿ ನಿಲುಗಡೆಯಾಗಲಿವೆ. ಕಾಕತಿ ಕಡೆಯಿಂದ ಬರುವ ಬಸ್‌ಗಳು ಧರ್ಮನಾಥ ಭವನದ ಬಳಿ ನಿಲುಗಡೆಯಾಗಲಿವೆ. ಗಣೇಶಪುರ ಮಾರ್ಗವಾಗಿ ಬರುವ ಬಸ್‌ಗಳು ಯೂನಿಯನ್‌ ಜಿಮ್‌ಖಾನಾ ಬಳಿ ನಿಲುಗಡೆಯಾಗಲಿವೆ.

ಇಲ್ಲಿ ಇಳಿದು, ಪ್ರಯಾಣಿಕರು ತಮ್ಮ ಸ್ಥಳಗಳತ್ತ ತೆರಳಬೇಕು. ರಾಷ್ಟ್ರಪತಿ ಅವರು ಸಂಚರಿಸುವ ಮಾರ್ಗವು ನಗರದ ಬಹುತೇಕ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಈ ಮಾರ್ಗವನ್ನು ‘ಜಿರೋ ಟ್ರಾಫಿಕ್‌’ ಮಾಡುವುದರಿಂದ ನಗರ ಸಾರಿಗೆ ಬಸ್‌ಗಳಿಗೆ ಸಂಚರಿಸಲು ಆಸ್ಪದವೇ ಇಲ್ಲದಂತಾಗಲಿದೆ.

ರಾಷ್ಟ್ರಪತಿ ಹಾಗೂ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯವರು ಕಾರ್ಯಕ್ರಮ ಮುಗಿಸಿಕೊಂಡು ವಾಪಸ್‌ ಹೋದ ನಂತರ ಮಧ್ಯಾಹ್ನ 3 ಗಂಟೆಯ ನಂತರ ಬಸ್‌ಗಳು ಸಂಚರಿಸುವ ನಿರೀಕ್ಷೆಯಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !