ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತಿ–ಪತಿಯಾದ ದೃಷ್ಟಿದೋಷವುಳ್ಳ ಜೋಡಿ

Last Updated 4 ಜುಲೈ 2021, 13:45 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಹನುಮಾನ ನಗರದ ಭಕ್ತಿವಾಸ ಸಾಂಸ್ಕೃತಿಕ ಭವನವು ವಿಶೇಷ ಮದುವೆಗೆ ಭಾನುವಾರ ಸಾಕ್ಷಿಯಾಯಿತು. ದೃಷ್ಟಿದೋಷವುಳ್ಳ ಜೋಡಿಯು ವೈವಾಹಿಕ ಜೀವನ ಪ್ರವೇಶಿಸಿತು.

ನಗರದ ಸಮರ್ಥನಂ ಅಂಗವಿಕಲರ ಸಂಸ್ಥೆಯಲ್ಲಿ ಟೆಲಿಕಾಲರ್ ಆಗಿರುವ ದೀಪಾ ಹಾಗೂ ಬೆಂಗಳೂರಿನ ರಾಜಾಜಿನಗರದ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಎಸ್.ರವಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಉಷಾತಾಯಿ ಪೋತದಾರ ಪ್ರತಿಷ್ಠಾನ, ಸ್ಫೂರ್ತಿ ಸಂಘ ಹಾಗೂ ಸಮರ್ಥನಂ ದೃಷ್ಟಿದೋಷವುಳ್ಳವರ ಸಂಸ್ಥೆಯ ಸಹಯೋಗದಲ್ಲಿ ಮದುವೆ ಕಾರ್ಯ ನೆರವೇರಿತು. ಕುಟುಂಬದವರು ಮತ್ತು ಬಂಧುಗಳು ನವ ಜೋಡಿಗೆ ಶುಭ ಹಾರೈಸಿದರು.

‘ಪ್ರತಿಷ್ಠಾನದಿಂದ ಹಲವು ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದು ನಾವು ಮಾಡಿಸಿದ 25ನೇ ಮದುವೆಯಾಗಿದೆ. ದೃಷ್ಟಿದೋಷದ ಕಾರಣಕ್ಕೆ ಯುವಕ– ಯುವತಿ ಮದುವೆಯಾಗದೆ ಉಳಿಯಬಾರದು. ಅವರು ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ನೆರವಾಗುತ್ತಿದ್ದೇವೆ. ಹಿಂದೆಲ್ಲಾ ಅದ್ಧೂರಿಯಾಗಿ ನೆರವೇರಿಸುತ್ತಿದ್ದೆವು. ಈ ಬಾರಿ ಕೋವಿಡ್ ಕಾರಣದಿಂದ ಸರಳವಾಗಿತ್ತು. ಆದರೆ, ಶಾಸ್ತ್ರೋಕ್ತವಾಗಿ ನಡೆದಿದೆ’ ಎಂದು ಉಷಾತಾಯಿ ಪೋತದಾರ ಪ್ರತಿಷ್ಠಾನದ ಮುಖ್ಯಸ್ಥ ಅನಿಲ ಪೋತದಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಸಮರ್ಥನಂ ಅಂಗವಿಕಲರ ಅಧ್ಯಕ್ಷಮಹಾಂತೇಶ ಕಿವಡಸಣ್ಣವರ, ವ್ಯವಸ್ಥಾಪಕ ಅರುಣಕುಮಾರ ಎಂ.ಜಿ., ವಾಸಂತಿ ಸವಣೂರ, ಪೋಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT