ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ | ವಿಠ್ಠಲ- ರಕ್ಮಿಣಿ ವೈಭವದ ಜಾತ್ರೆ

Last Updated 26 ಜುಲೈ 2022, 8:38 IST
ಅಕ್ಷರ ಗಾತ್ರ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪಟ್ಟಣದ ಜವಳಿ ಕೂಟದಲ್ಲಿರುವ ವಿಠ್ಠಲ- ರುಕ್ಮಿಣಿ ದೇವಸ್ಥಾನದ ಜಾತ್ರಾ ಮಹೋತ್ಸವ, ಸಂತ ಶಿರೋಮಣಿ ನಾಮದೇವ ಮಹಾರಾಜರ 672ನೇ ಪುಣ್ಯತಿಥಿ ಅಂಗವಾಗಿ ಮಂಗಳವಾರ ವಿಠ್ಠಲ ರುಕ್ಮಿಣಿ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.

ಮಹಾರಾಷ್ಟ್ರದ ಆಳಂದಿಯ ಭಾವಭಕ್ತಿ ವಾರಕರಿ ಶಿಕ್ಷಣ ಸಂಸ್ಥಾನದ ಭಜನಾ ತಂಡದ ವಿಠ್ಠಲ ರುಕ್ಮಿಣಿ ಸ್ಮರಣೆಯ ಭಕ್ತಿಗೀತೆಗಳ ಭಜನೆ ಕಣ್ಮನ ಸೆಳೆಯಿತು.

ಉತ್ಸವಮೂರ್ತಿ ಪ್ರತಿಷ್ಠಾಪಿಸಿದ ಪಲ್ಲಕ್ಕಿ ಮೆರವಣಿಗೆ ಜವಳಿ ಕೂಟದ ದೇವಸ್ಥಾನ ಆವರಣದಿಂದ ಹೊರಟು ಗೊಂಬಿಗುಡಿ, ಕೊಪ್ಪದ ಗಲ್ಲಿ, ಮಾರುತಿ ದೇವಸ್ಥಾನ, ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಮರಳಿ ದೇವಸ್ಥಾನಕ್ಕೆ ಬಂದು ತಲುಪಿತು.

ನಾಮದೇವ ಶಿಂಪಿ ಸಮಾಜದ ಅಧ್ಯಕ್ಷ ಅಣ್ಣಪ್ಪ ಜೂಂಜಾಳೆ, ಮಿತ್ರ ಮಂಡಳ ಅಧ್ಯಕ್ಷ ಸುವಾಸ ಬೊಂಗಾಳೆ, ಸಮಾಜದವರು ಇದ್ದರು.

ಅಪಾರ ಸಂಖ್ಯೆಯ ಭಕ್ತರು ಉತ್ಸವದಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT