ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಎಣಿಕೆ: ಸಂಚಾರ ಮಾರ್ಗ ಬದಲು

ನಗರದೊಳಗೆ ಪ್ರವೇಶಿಸದಂತೆ ಭಾರಿ ವಾಹನಗಳ ಮೇಲೆ ನಿಷೇಧ;
Last Updated 21 ಮೇ 2019, 12:20 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರ ಚುನಾವಣೆಯ ಮತಗಳ ಎಣಿಕೆ ಕಾರ್ಯವು ಇಲ್ಲಿನ ಆರ್‌ಪಿಡಿ ಕಾಲೇಜಿನಲ್ಲಿ ಗುರುವಾರ ನಡೆಯಲಿದ್ದು, ಈ ಮಾರ್ಗದ ಮೂಲಕ ಸಂಚರಿಸುವ ವಾಹನಗಳ ಮಾರ್ಗಗಳಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಅಲ್ಲದೇ, ವಾಹನ ನಿಲುಗಡೆಗೂ ಸ್ಥಳ ಗುರುತು ಮಾಡಲಾಗಿದೆ.

ಅಭ್ಯರ್ಥಿಗಳ ವಾಹನಗಳು: ಆರ್‌ಪಿಡಿ (1ನೇ ಗೇಟ್‌) ಮೂಲಕ ಪ್ರವೇಶಿಸಿ ಆಫೀಸ್ ಕಟ್ಟಡದ ಪಕ್ಕದ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು. ಏಜೆಂಟ್‌ರ ವಾಹನಗಳನ್ನು ಕಾಲೇಜ್ ವಿದ್ಯಾರ್ಥಿಗಳ ವಾಹನ ನಿಲುಗಡೆ ಸ್ಥಳದಲ್ಲಿ (ಯುನಿಯನ್ ಬ್ಯಾಂಕ್ ಹತ್ತಿರ) ಮಾಡಬೇಕು.

ಮಾಧ್ಯಮ ಪ್ರತಿನಿಧಿಗಳು ಹಾಗೂ ಮತ ಎಣಿಕೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ, ಸಿಬ್ಬಂದಿಗಳು ತಮ್ಮ ವಾಹನಗಳನ್ನು ಭಾಗ್ಯ ನಗರ 2ನೇ ಕ್ರಾಸ್ ಮೂಲಕ ಲೋಕಮಾನ್ಯ ಮಲ್ಟಿ ಪರ್ಪಸ್‌ ಕೋ-ಆಪರೇಟಿವ್‌ ಸೊಸೈಟಿ ದಾಟಿ ಎಡಕ್ಕೆ ತಿರುವು ಪಡೆದುಕೊಂಡು ಮಾವಿನ ತೋಟದ ಗೇಟ್‌ ಮೂಲಕ ಆರ್‌ಪಿಡಿ ಕಾಲೇಜ್ ಮೈದಾನದಲ್ಲಿ ನಿಲುಗಡೆಗೊಳಿಸಬೇಕು.

ಸಾರ್ವಜನಿಕರ ವಾಹನಗಳ ನಿಲುಗಡೆ: ಗೋಕಾಕ ಹಾಗೂ ಅರಭಾವಿ ಭಾಗಗಳಿಂದ ಬರುವ ಸಾರ್ವಜನಿಕರು ಲೇಲೆ ಮೈದಾನ ಹಾಗೂ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ವಾಹನಗಳನ್ನು ನಿಲುಗಡೆಗೊಳಿಸಬೇಕು.

ಬೈಲಹೊಂಗಲ, ರಾಮದುರ್ಗ ಹಾಗೂ ಸೌಂದತ್ತಿ ಯಲ್ಲಮ್ಮಗುಡ್ಡ ಭಾಗಗಳಿಂದ ಬರುವ ಸಾರ್ವಜನಿಕರು ಹಳೆ ಪಿಬಿ ರಸ್ತೆ, ನಾಥಪೈ ಸರ್ಕಲ್ ಮೂಲಕ ವಡಗಾಂವ ಪ್ರದೇಶದ ಗ್ರಾಮೀಣ ಪೊಲೀಸ್ ಠಾಣೆ ಎಡಬದಿಯ ಆದರ್ಶ ನಗರ ಶಾಲೆ ಮೈದಾನ
ಹಾಗೂ ಆದರ್ಶ ನಗರ ರಸ್ತೆ ಪಕ್ಕದಲ್ಲಿ ವಾಹನಗಳನ್ನು ಇತರೆ ವಾಹನಗಳ ಸಂಚಾರಕ್ಕೆ ಅಡೆತಡೆಯಾಗದಂತೆ ರಸ್ತೆಯ ಎಡಬದಿಯಲ್ಲಿ ನಿಲುಗಡೆ ಮಾಡಬೇಕು.

ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಹಾಗೂ ಬೆಳಗಾವಿ ಗ್ರಾಮೀಣ ಭಾಗಗಳಿಂದ ಬರುವ ಸಾರ್ವಜನಿಕರು 3ನೇ ರೇಲ್ವೆ ಗೇಟ್‌ದಿಂದ ಪೀರನವಾಡಿವರೆಗಿನ ರಸ್ತೆ ಪಕ್ಕದಲ್ಲಿ ವಾಹನಗಳನ್ನು ಇತರೆ ವಾಹನಗಳ ಸಂಚಾರಕ್ಕೆ ಅಡೆತಡೆಯಾಗದಂತೆ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಬೇಕು.

ಟಿಳಕವಾಡಿ ಪ್ರದೇಶದಲ್ಲಿ ರೇಲ್ವೆ ಸಂಚಾರದಿಂದಾಗಿ 1, 2 ಹಾಗೂ 3ನೇ ರೇಲ್ವೆ ಗೇಟ್‌ ಮೇಲಿಂದ ಮೇಲೆ ಬಂದ್‌ ಮಾಡಲಾಗುವುದರಿಂದ ಹಾಗೂ ಕಾಂಗ್ರೆಸ್ ರಸ್ತೆಯಲ್ಲಿ ಸ್ಮಾರ್ಟ ಸಿಟಿ ಕಾಮಗಾರಿ ನಡೆಯುತ್ತಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವುದನ್ನು ಸಾಧ್ಯವಾದಷ್ಟು ತಡೆಯಬೇಕು.

ನೋ-ಪಾರ್ಕಿಂಗ್ ವಲಯ: ಗೋವಾವೇಸ್ ಸರ್ಕಲ್‌ದಿಂದ ಬಿಗ್ ಬಜಾರ್‌ ಕ್ರಾಸ್ ವರೆಗಿನ ಖಾನಾಪೂರ ರಸ್ತೆ, ಗೋಗಟೆ ವೃತ್ತದಿಂದ
3ನೇ ರೇಲ್ವೆ ಗೇಟ್‌ವರೆಗಿನ ಕಾಂಗ್ರೆಸ್ ರಸ್ತೆ ಹಾಗೂ ಆರ್‌ಪಿಡಿ ಸರ್ಕಲ್ ದಿಂದ ಸೋಮವಾರ ಪೇಟೆ ಕ್ರಾಸ್ ವರೆಗಿನ ದೇಶಮುಖ ರಸ್ತೆಯಲ್ಲಿ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.

ಮಾರ್ಗ ತಿರುವು:

ಗೋವಾವೇಸ್ ಸರ್ಕಲ್ ಕಡೆಯಿಂದ ಆರ್‌ಪಿಡಿ ಸರ್ಕಲ್ ಕಡೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿದ್ದು, ಎಲ್ಲ ವಾಹನಗಳು ಮಹಾವೀರ ಭವನ ಹತ್ತಿರ ಎಡಕ್ಕೆ ತಿರುವು ತೆಗೆದುಕೊಂಡು ಗುರುದೇವ ರಾನಡೆ ರಸ್ತೆ, ಭಗತ ಸಿಂಗ್ ಗಾರ್ಡನ ಪಕ್ಕದ
ರಸ್ತೆಯ ಮೂಲಕ ಆದರ್ಶ ನಗರ, ವಡಗಾಂವ ಪ್ರದೇಶದ ಗ್ರಾಮೀಣ ಪೊಲೀಸ್ ಠಾಣೆ ಮುಂದಿನಿಂದ ಭಾಗ್ಯ ನಗರ 10ನೇ ಕ್ರಾಸ್ ಮುಖಾಂತರ ಅನಗೋಳ ಹರಿಮಂದಿರ ಕ್ರಾಸ್, ಬಿಗ್‌ಬಜಾರ್ ಕ್ರಾಸ್, 3ನೇ ರೇಲ್ವೆ ಗೇಟ್‌ ಮೂಲಕ ಖಾನಾಪೂರ ರಸ್ತೆ ಸೇರಬೇಕು.

3ನೇ ರೇಲ್ವೆ ಗೇಟ್ ಮೂಲಕ ಗೋವಾವೇಸ್ ಸರ್ಕಲ್ ಕಡೆಗೆ ಸಂಚರಿಸುವ ಎಲ್ಲ ವಾಹನಗಳು ಬಿಗ್ ಬಜಾರ ಕ್ರಾಸ್ ದಾಟಿ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ ಹತ್ತಿರ ಎಡಕ್ಕೆ ತಿರುವು ತೆಗೆದುಕೊಂಡು 2ನೇ ರೇಲ್ವೆ ಗೇಟ್ ಮೂಲಕ ಕಾಂಗ್ರೆಸ್ ರಸ್ತೆ ಸೇರಿ ಮುಂದೆ ಸಾಗುವುದು.

ಶಹಾಪುರ ಕಡೆಯಿಂದ ನಗರಕ್ಕೆ ಬರುವ ಎಲ್ಲ ಮಾದರಿ ವಾಹನಗಳು ಗೋವಾ ವೇಸ್ ಸರ್ಕಲ್ ಹತ್ತಿರ ಬಲಕ್ಕೆ ತಿರುವು ಪಡೆದುಕೊಂಡು ಮಹಾತ್ಮಾ ಫುಲೆ ರಸ್ತೆ, ಕಪಿಲೇಶ್ವರ ಫ್ಲೈ ಓವರ್, ಶನಿಮಂದಿರ ಮೂಲಕ ಅಥವಾ ಹಳೆ ಪಿ.ಬಿ. ರಸ್ತೆ ಮೂಲಕ ಮುಂದೆ ಸಾಗಬೇಕು.

ಭಾರಿ ವಾಹನಗಳ ಪ್ರವೇಶಕ್ಕೆ ನಿಷೇಧ:

ಮತ ಎಣಿಕೆ ಮುಗಿಯುವವರೆಗೆ ನಗರದೊಳಗೆ ಪ್ರವೇಶಿಸದಂತೆ ಭಾರಿ ವಾಹನಗಳ ಮೇಲೆ ನಿಷೇಧ ಹೇರಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT