ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆ ಅರಿವಿಗೆ ‘ವಾಕಥಾನ್‌’

Last Updated 13 ಅಕ್ಟೋಬರ್ 2019, 11:00 IST
ಅಕ್ಷರ ಗಾತ್ರ

ಬೆಳಗಾವಿ: ‘ಯುವಜನತೆ ಸದೃಢವಾದರೆ ದೇಶ ಬಲಿಷ್ಠವಾಗುತ್ತದೆ’ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿದರು.

ಇಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ, ಶಾಸಕ ಅಭಯ ಪಾಟೀಲ ಸಹಯೋಗದಲ್ಲಿ ಭಾನುವಾರ ನಡೆದ ‘ವಾಕಥಾನ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅಧಿಕ ಜನಸಂಖ್ಯೆ ಹೊಂದಿರುವ ದೇಶಗಳ ಪೈಕಿ ಭಾರತ 2ನೇಯದಾಗಿದೆ. ಅದರಂತೆ ಅಧಿಕ ಯುವಜನತೆಯನ್ನೂ ಕೂಡ ಹೊಂದಿದೆ. ಆದರೆ, ಪೌಷ್ಟಿಕಾಂಶಗಳು ಮತ್ತು ಜೀವಸತ್ವಗಳ ಕೊರತೆ, ನಿಯಮಿತ ವ್ಯಾಯಾಮ ಮಾಡದಿರುವುದು, ಅತಿಯಾಗಿ ತಂತ್ರಜ್ಞಾನಗಳ ದಾಸರಾಗಿರುವುದರಿಂದ ಯುವಜನರಲ್ಲಿ ಸದೃಢತೆ ಕಡಿಮೆಯಾಗುತ್ತಿದೆ. ಇದು ವಿಷಾದನೀಯ’ ಎಂದರು.

ಶಾಸಕ ಅಭಯ ಪಾಟೀಲ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆಯುತ್ತಿದ್ದಾರೆ. ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ಮುಕ್ತ ಸಮಾಜದ ಬಗ್ಗೆ, ಆರೋಗ್ಯ ಪೂರ್ಣ ಜೀವನ ಕ್ರಮದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಪ್ಲಾಸ್ಟಿಕ್ ಉಪಯೋಗಿಸುವುದನ್ನು ನಿಲ್ಲಿಸಬೇಕು’ ಎಂದು ಸಲಹೆ ನೀಡಿದರು.

ಹಿರಿಯ ನಾಗರಿಕರ ಸಂಘದ ಮುಖಂಡ ಪ್ರಭಾಕರ ಕುಲಕರ್ಣಿ, ‘ನಡಿಗೆಯು ನಮಗೆ ಅತ್ಯಂತ ಸರಳವಾಗಿ ಆರೋಗ್ಯವನ್ನು ಕಾಪಾಡುವಂತಹ ಸಾಧವಾಗಿದೆ. ವಾಹನಗಳ ದಾಸರಾಗಬಾರದು’ ಎಂದರು.

ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ನಿರ್ದೇಶಕ ಡಾ.ಎಸ್‌.ಸಿ. ಧಾರವಾಡ ಸ್ವಾಗತಿಸಿದರು. ಸಾಮಾಜಿಕ ಕಾರ್ಯಕರ್ತ ವಿಜಯ್ ಮೋರೆ ಇದ್ದರು.

ಟಿಳಕವಾಡಿಯ ಲೇಲೆ ಮೈದಾನದಿಂದ ಪ್ರಾರಂಭವಾದ ವಾಕಥಾನ್‌ 2ನೇ ರೈಲು ಗೇಟ್– ಆರ್‌ಪಿಡಿ ವೃತ್ತ– ಗೋಮಟೇಶ ಶಾಲೆ– ಯಳ್ಳೂರ ಕ್ರಾಸ್ ಮೂಲಕ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ತಲುಪಿತು. ನೂರಾರು ಮಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT