ಭಾನುವಾರ, ಡಿಸೆಂಬರ್ 15, 2019
21 °C

ನೀರಿನ ಸಮಸ್ಯೆ: ಮಹಿಳೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ನಿಪ್ಪಾಣಿ: ಕುಡಿಯುವ ನೀರಿನ ಪೂರೈಕೆಯಾಗುತ್ತಿಲ್ಲ ಎಂದು ಆರೋಪಿಸಿ ಇಲ್ಲಿನ ಆಶ್ರಯ ನಗರದಲ್ಲಿಯ ಮಹಿಳೆಯರು ಶುಕ್ರವಾರ ನಿರಂತರ ಕುಡಿಯುವ ನೀರಿನ ಯೋಜನೆಯ ಗುತ್ತಿಗೆದಾರ ಜೈನ್‌ ಇರ್ರಿಗೇಶನ್‌ ಕಂಪನಿಯ ಕಾರ್ಯಾಲಯಕ್ಕೆ ಬೀಗ ಹಾಕಲು ಮುಂದಾದರು.

ಆಶ್ರಯ ನಗರದಲ್ಲಿನ 3ನೇ ಮತ್ತು 4ನೇ ಗಲ್ಲಿಯಲ್ಲಿ ಕಳೆದ ಭಾನುವಾರ ತುಸು ಹೊತ್ತು ನೀರು ಪೂರೈಕೆ ಮಾಡಲಾಗಿತ್ತು. ಅದರ ನಂತರ ನೀರು ಪೂರೈಕೆ ಮಾಡದೇ ಇದ್ದ ಪರಿಣಾಮ ಸ್ಥಳೀಯರು ಅನೇಕ ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರ ಕಂಪನಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಇದರಿಂದ ಮಹಿಳೆಯರು ಮೆರವಣಿಗೆ ಮೂಲಕ ಗುತ್ತಿಗೆದಾರರ ಕಾರ್ಯಾಲಯಕ್ಕೆ ಬಂದು ಬೀಗ ಜಡಿಯಲು ಪ್ರಯತ್ನಿಸಿದರು.

ನಂತರ ಕಂಪನಿಯ ಅಧಿಕಾರಿಗಳು ನೀರು ಪೂರೈಕೆ ಮಾಡಿದರು. ಸ್ಥಳೀಯ ನಗರಸಭೆ ಪೌರಾಯುಕ್ತರಿಗೂ ಈ ಕುರಿತು ನಾಗರಿಕರು ಮನವಿ ಸಲ್ಲಿಸಿದರು. ಕುಡಿಯುವ ನೀರಿನ ಪೂರೈಕೆ ಸಮರ್ಪಕವಾಗಬೇಕು ಎಂದು ಒತ್ತಾಯಿಸಿದರು.

ರೇಖಾ ಕೋಳಿ, ಶೋಭಾ ಕಡಗಾವೆ, ಛಾಯಾ ಭಾಟಲೆ, ರಾಹುಲ ಭಾಟಲೆ, ಸದ್ದಾಂ ಖಾನಾಪುರೆ, ಶಂಕರ ಭಾಟಲೆ, ಪಿಂಟು ಪಠಾಡೆ, ಅಜೀತ ಪಾಟೀಲ ಇದ್ದರು.

ಪ್ರತಿಕ್ರಿಯಿಸಿ (+)