‘ನೈಸರ್ಗಿಕ ಸಂಪನ್ಮೂಲ ಮುಂದಿನ ಪೀಳಿಗೆಗೂ ಉಳಿಸಬೇಕು’

ಅಥಣಿ: ‘ಈ ಭೂಮಿ ನಮಗೆ ಸಿಕ್ಕ ವರದಾನವಲ್ಲ. ಮುಂದಿನ ಪೀಳಿಗೆಗೆ ಕೊಡಬೇಕಾದ ಕಾಣಿಕೆಯಾಗಿದೆ. ಇದಕ್ಕಾಗಿ ಪರಿಸರವನ್ನು ನಾವು ಕಾಪಾಡಿಕೊಳ್ಳಬೇಕು’ ಎಂದು ಶಿಕ್ಷಕಿ ಪ್ರಿಯಂವದಾ ಅಣೆಪ್ಪನವರ ಹೇಳಿದರು.
ಸಹಾಯ ಪ್ರತಿಷ್ಠಾನ ಹಾಗೂ ಅರಣ್ಯ ಇಲಾಖೆ ವತಿಯಿಂದ ಇಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ವಿದ್ಯಾರ್ಥಿ ದಿವಸ ಕಾರ್ಯಕ್ರಮವನ್ನು ಸಸಿ ನೆಡುವ ಮೂಲಕ ಅವರು ಉದ್ಘಾಟಿಸಿದರು.
‘ನೆಲ, ಜಲ ಹಾಗೂ ಸಂಸ್ಕೃತಿಯನ್ನು ಉಳಿಸಿ–ಬೆಳೆಸಿ ಮುಂದಿನ ಪೀಳಿಗೆಗೆ ನೀಡುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.
ಮುಖಂಡ ಸುಭಾಸ ಮಾಳಿ, ಅರಣ್ಯ ಇಲಾಖೆ ಸಿಬ್ಬಂದಿ ರಾಯಪ್ಪ ಬಬಲಿ, ಅಧ್ಯಕ್ಷತೆ ವಹಿಸಿದ್ದ ಸಹಾಯ ಪ್ರತಿಷ್ಠಾನದ ಸಂತೋಷ ಬಡಕಂಬಿ, ಮುಖಂಡ ತೌಸಿಫ್ ಸಾಂಗಲೀಕರ, ರವಿ ಬಡಕಂಬಿ ಹಾಗೂ ಸಚಿನ ಅವಟಿ ಮಾತನಾಡಿದರು.
ಮುಖಂಡರಾದ ಪ್ರಶಾಂತ ಮಾಳಿ, ಶಶಿಧರ, ಶ್ರದ್ಧಾ ಐಗಳಿ, ಅಶ್ವಿನಿ ಪೂಜಾರಿ, ಸುಜಾತಾ ಹಿರೇಮಠ, ಅಶ್ವಿನಿ ಹೂರಣಗಿ, ಜ್ಯೋತಿಬಾ ಭೋಸಲೆ, ರಾಜೇಶ್ವರಿ ಮುಳ್ಳಟ್ಟಿ, ಮೇಘಾ ದಡ್ಡನ್ನವರ, ಪೂಜಾ ಕೌಜಲಗಿ, ಅಭಿಷೇಕ ಚವಾಣ, ಸೌರಭ ಬೋರಾಡೆ, ಅಖಿಲೇಶ ಬೆಳವೀಕರ, ಪೂಜಾ ಕಲಚಿಮ್ಮಡ, ರೇಣುಕಾ ಅಂಕಲಗಿ, ಶೈಲಜಾ ಬಿರಾದಾರ, ಸ್ವಾತಿ ಮರಾಠೆ, ಅಕ್ಷತಾ ಅಥಣಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.