ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೆ: ಡಾ.ಅಂಜಲಿ ಸಲಹೆ

ಅಂಗಾಂಗ ದಾನಕ್ಕೆ ಶಾಸಕಿ ಡಾ.ಅಂಜಲಿ ಸಲಹೆ
Last Updated 26 ಏಪ್ರಿಲ್ 2022, 3:18 IST
ಅಕ್ಷರ ಗಾತ್ರ

ಖಾನಾಪುರ: ಮರಣಾ ನಂತರ ನಮ್ಮ ದೇಹವನ್ನು ಪಂಚಭೂತಗಳಲ್ಲಿ ಲೀನಗೊಳಿಸುವ ಬದಲು ವೈದ್ಯಕೀಯ ಅಧ್ಯಯನ ಹಾಗೂ ಅಗತ್ಯವಿದ್ದವರಿಗೆ ಅಳವಡಿಸುವ ಸಲುವಾಗಿ ಅಂಗಾಂಗದಾನ ಮತ್ತು ನೇತ್ರದಾನ ಮಾಡುವ ಸಂಕಲ್ಪ ಮಾಡಬೇಕು ಎಂದು ಶಾಸಕಿ ಡಾ.ಅಂಜಲಿ ನಿಂಬಾಳಕರ ಕರೆ ನೀಡಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸೋಮವಾರ ಆಯುಷ್ಮಾನ್ ಭಾರತ್ ಅಭಿಯಾನ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಬೃಹತ್ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿರು. ಪಟ್ಟಣದ 50 ಹಾಸಿಗೆಗಳ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆಯನ್ನು 100 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲು ಅನುಮೋದನೆ ದೊರೆತಿದೆ. ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಭಾರಿ ಡಿಎಚ್ಒ ಡಾ.ಈಶ್ವರಪ್ಪ ಗಡಾದ, ಏ.25 ವಿಶ್ವ ಮಲೇರಿಯಾ ನಿರ್ಮೂಲನಾ ದಿನವಾಗಿದ್ದು, ಮಲೇರಿಯಾ ರೋಗ ನಿರ್ಮೂಲನೆಗೆ ಸಾರ್ವಜನಿಕರು ಆಡಳಿತ ವ್ಯವಸ್ಥೆ ಜೊತೆ ಸಹಕರಿಸಬೇಕು ಎಂದರು.

ಮಲೇರಿಯಾ ನಿರ್ಮೂಲನಾ ದಿನದ ಅಂಗವಾಗಿ ಗಣ್ಯರಿಂದ ಭಿತ್ತಿ ಪತ್ರ ಮತ್ತು ಮಾಹಿತಿ ಪತ್ರಿಕೆಗಳನ್ನು ಬಿಡುಗಡೆಗೊಳಿಸಲಾಯಿತು. ತಹಶೀಲ್ದಾರ್ ಪ್ರವೀಣ ಜೈನ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಮಜಹರ ಖಾನಾಪುರಿ, ಮುಖ್ಯಾಧಿಕಾರಿ ಬಿ.ಎಂ ಮಾನೆ, ಬಿಇಒ ಎಲ್.ವಿ ಯಕ್ಕುಂಡಿ, ಸಿಡಿಪಿಒ ರಾಮಮೂರ್ತಿ, ವೈದ್ಯಾಧಿಕಾರಿಗಳಾದ ಡಾ.ಅನೀಲ ಕೊರಬು, ಡಾ.ಎಂ.ಎಸ್ ಪಲ್ಲೇದ, ಡಾ.ಮಹೇಶ ಕಿವಡಸಣ್ಣವರ, ಡಾ.ಸಂಜೀವ ನಾಂದ್ರೆ, ಡಾ.ಸಂಜಯ ಡುಮಗೋಳ, ಡಾ.ಮಂಜುನಾಥ ದಳವಾಯಿ, ಡಾ.ಪ್ರಭುದೇವ ತೋಡಕರ, ಡಾ.ಪವನ್ ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT