ಅಥಣಿ: ಆಧುನಿಕ ಸಮಾಜದಲ್ಲಿ ಮಹಿಳೆಯರು ಪ್ರತಿಯೊಂದು ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸದೃಢ ಸಮಾಜ ಮತ್ತು ದೇಶ ಕಟ್ಟುವಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ ಎಂದು ಅನ್ನಪೂರ್ಣಾ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಡಾ.ದೀಪಾ ಪಾಂಗಿ ಹೇಳಿದರು.

ಅವರು ಮಂಗಳವಾರ ಇಲ್ಲಿನ ಅನ್ನಪೂರ್ಣಾ ಶಿಕ್ಷಣ ಸಮೂಹ ಸಂಸ್ಥೆಯಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಆಹಾರ ಉತ್ಸವ ಹಾಗೂ ಮಹಿಳಾ ಶಕ್ತಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಆರೋಗ್ಯವಂತ ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ. ಅಡುಗೆ ಮನೆ ಔಷಧಾಲಯ, ಗ್ರಹಿಣಿಯೇ ವೈದ್ಯಳಾದರೆ, ಆಹಾರವೇ ಔಷಧವಾಗುತ್ತದೆ ಎಂದರು.

ಅತಿಥಿ ಉಪನ್ಯಾಸಕರಾಗಿದ್ದ ಡಾ.ರಾಗಿಣಿ ಪಾಟೀಲ ಮಾತನಾಡಿ, ಮಹಿಳೆಯರು ಸಮಾಜಕ್ಕಾಗಿ ಸಲ್ಲಿಸಿರುವ ಸೇವೆ, ನಾಯಕತ್ವ ಶಕ್ತಿ ಮತ್ತು ಸಾಮಾಜಿಕ ಬದ್ಧತೆಯನ್ನು ಹೆಚ್ಚು ಮೌಲ್ಯಮಾಪನ ಮಾಡಬೇಕು ಎಂದು ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷೆ ಡಾ.ಪೂರ್ಣಿಮಾ ಪಾಂಗಿ ಅಧ್ಯಕ್ಷತೆ ವಹಿಸಿದ್ದರು. ಹಂಸಗಾಮಿನಿ ಮಹಿಳಾ ಸಂಘದ ಅಧ್ಯಕ್ಷೆ ಜಯಶ್ರೀ ಕಿನಿಂಗೆ, ಕಾರ್ಯದರ್ಶಿ ಶೀಲಾ ಯಲಗುದ್ರಿ, ಸಮಾಜ ಸೇವಕಿ ಗೀತಾ ತೋರಿ, ಕವಿತಾ ಕಲತರಿ, ಅನಿತಾ ಬಣಜವಾಡ, ಭಾರತಿ ಬಿಜಾಪುರೆ ಸೇರಿದಂತೆ ಶೀಲ್ಪಾ ಚೌಗಲಾ, ಲಕ್ಷ್ಮಿ ದಳವಾಯಿ, ಶ್ರೀದೇವಿ ನಾಯಿಕ, ಅಕ್ಷತಾ ಕುಲಕರ್ಣಿ, ಸುಕನ್ಯಾ ಮಂಚಾ, ಪೂರ್ಣಿಮಾ ನಾಯಿಕ, ಸೌಂದರ್ಯಾ ಕೊಟ್ಟಲಗಿ, ರಾಜಶ್ರೀ ಕುಂಭಾರ, ಸುಜಾತ ಔಟಗಿ, ಸವಿತಾ ಮಗದುಮ, ಪ್ರೇಮಾ ಕುಂಭಾರ, ಸನಾ ಸಾಂಗ್ಲಿಕರ, ಪ್ರತೀಕ್ಷಾ ಸನದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.