ಯರಗಟ್ಟಿ: ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಶಿವಾಪುರ, ಕೋಟೂರ, ಬೋಳಕಡಬಿ, ಕಡಬಿ, ಗೋರಗುದ್ದಿ ಗ್ರಾಮದ ರೈತರು ಕೋಟೂರ ಹೆಸ್ಕಾಂ ಕಚೇರಿ ಆವರಣದಲ್ಲಿ ಈಚೆಗೆ ಪ್ರತಿಭಟನೆ ನಡೆಸಿದರು.

ಕೃಷಿಕ ಸಮಾಜದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಮಹಾಂತೇಶ ತೋಟಗಿ ಮಾತನಾಡಿ, ‘ಸಮರ್ಪಕ ವಿದ್ಯುತ್ ಪೂರೈಕೆಯಾಗದೆ ನೀರಿಲ್ಲದೆ ಬೆಳೆಗಳು ಒಣಗುತ್ತಿವೆ. ಹೀಗೆ ಪರಿಸ್ಥಿತಿ ಮುಂದುವರಿದರೆ ನಮಗಾಗುವ ನಷ್ಟ ಭರಿಸುವವರಾರು, ಇಲ್ಲವಾದರೆ, ಕಚೇರಿ ಬಂದ್ ಮಾಡಿ ಯರಗಟ್ಟಿ ನಾಲ್ಕು ರಾಜ್ಯ ಹೆದ್ದಾರಿ ಬಂದ್ ಮಾಡಿ ಧರಣಿ ನಡೆಸಲಾಗವುದು ಎಂದು ಎಚ್ಚರಿಸಿದರು.

ಬೆಳಗಾವಿ ಹೆಸ್ಕಾಂ ಕಚೇರಿಗೆ ಎರಡು ಸಲ ಮನವಿ ಕೊಟ್ಟಿದ್ದೇವೆ, ಒಂದು ಸಲ ಯರಗಟ್ಟಿ ಕಚೇರಿ ಬಂದ್ ಮಾಡಿ ಪ್ರತ್ರಿಭಟಿಸಿದ್ದೇವೆ. 33 ಕೆ.ವಿ ಇದ್ದದ್ದು, 110 ಕೆ.ವಿ ಟ್ರಾನ್ಸ್ಫಾರ್ಮ್ ಅನುಮತಿ ಇದ್ದರೂ ನಿರ್ಮಿಸಲು ಸುಮಾರು ಎರಡು ವರ್ಷಗಳಿಂದ ಪ್ರಾರಂಭವಾದ ಕೆಲಸ, ಕಂಬ, ತಂತಿ ಜೋಡಿಸಿದ್ದು, ಬಿಟ್ಟರೆ ಯಾವ ಕೆಲಸ ಮಾಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಅಧಿಕಾರಿ, ಮಾನೆಕರ ಮತ್ತು ಮಹೇಂದ್ರ ಇಸಾರಕರ ಅವರೊಂದಿಗೆ ಮಾತಿನ ಚಕಮಕಿ ನಡೆಸಿ, ನೀವು ಫೆಬ್ರುವರಿಯಲ್ಲಿ ಕೆಲಸ ಮುಗಿಸುತ್ತೇವೆ ಎಂದುವರು ಇನ್ನೂವರೆಗೂ ಕೆಲಸ ಆಗಿಲ್ಲ ಎಂದು ಪಟ್ಟ ಹಿಡಿದರು. ನಂತರ ಅಧಿಕಾರಿಗಳ ಭರವಸೆಯಿಂದ ಪ್ರತಿಭಟನೆಯಿಂದ ಹಿಂಪಡೆಯಲಾಯಿತು.

ಅಶೋಕ ಹುಂಡೇಕಾರ, ಶ್ರೀಧರ ಉದಗಟ್ಟಿ, ಉಮೇಶ ವಸ್ತ್ರದ, ಹಜರತ್ ಮಕ್ಕಳಗೇರಿ, ಕರೆಪ್ಪ ಉಗರಗೋಳ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-21-1130563328

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.