ಯರಗಟ್ಟಿ: ಪಟ್ಟಣದ ಗೋಕಾಕ ರಸ್ತೆ ಪಕ್ಕದಲ್ಲಿರುವ ನಾಲ್ಕು ಎಕರೆ ವಿಸ್ತೀರಣದಲ್ಲಿ ಪ್ರಜಾಸೌಧ, ನಿರ್ಮಿಸಲು ಅಧಿಕಾರಿಗಳು ಕೈಕೊಂಡಿರುವ ನಿರ್ಧಾರ ವಿರೋಧಿಸಿ ಕನ್ನಡ ಸಂಘಟನೆ,ರೈತ ಸಂಘಟನೆ, ವ್ಯಾಪರಸ್ಥರ ಸಂಘಟನೆ, ಹೋಟೆಲ್ ಉದ್ಯಮಿಗಳ ಸಂಘಟನೆಗಳ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಬುಧವಾರ ತಹಶೀಲ್ದಾರ್ ಎಂ.ವಿ.ಗುಂಡಪ್ಪಗೋಳ ಅವರಿಗೆ ಮನವಿ ಸಲ್ಲಿಸಿದರು.

ಸಂಘಟನೆಯ ಮುಖಂಡರಾದ ಡಿ.ಕೆ.ರಫೀಕ್, ವೆಂಕಣ್ಣ ಹುರಕನ್ನವರ, ಜೆ.ರತ್ನಾಕರ ಶೆಟ್ಟಿ ಮಾತನಾಡಿ, ‘ಪ್ರಜೆಗಳ ಅಭಿಪ್ರಾಯ ಪಡೆಯದೇ, ಪ್ರಜಾಸೌಧ ನಿರ್ಮಾಣ ಮಾಡುವ ತೀರ್ಮಾನ ಸರಿಯಲ್ಲ, ಈಗ ಗುರುತಿಸಿರುವ ಪ್ರಜಾಸೌಧ ಯರಗಟ್ಟಿ ಪಟ್ಟಣದಿಂದ ನಾಲ್ಕು ಕಿ.ಮೀ ದೂರದಲ್ಲಿದೆ. ಇದರಿಂದ ಮಹಿಳೆರಿಗೆ, ರೈತರಿಗೆ, ಗ್ರಾಮಸ್ಥರಿಗೆ, ವಿದ್ಯಾರ್ಥಿಗಳಿಗೆ, ಅಂಗವಿಕಲರಿಗೆ, ವೃದ್ಧರಿಗೆ ತೊಂದರೆಯಾಗುತ್ತದೆ’ ಎಂದರು.

‘ಪಟ್ಟಣದಲ್ಲಿ ಎಲ್ಲ ಸರ್ಕಾರಿ ಕಚೇರಿಗಳು ಆರಂಭವಾದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ’ ಎಂದರು.

ಎಪಿಎಂಸಿ ಆವರಣದಲ್ಲಿ ನಡೆಯುವ ಜಾನುವಾರ ಸಂತೆ, ಗೋಕಾಕ ರಸ್ತೆ ಪಕ್ಕದಲ್ಲಿರು 8 ಎಕರೆ ಭೂ ವಿಸ್ತೀರಣ ಜಾಗದಲ್ಲಿ ಸ್ಥಳಾಂತರಿಸಿ, ಅಲ್ಲಿ ಪ್ರಜಾಸೌಧ ನಿರ್ಮಿಸಿ, ಅಲ್ಲಿ ಆಡಳಿತ ಕಚೇರಿಗಳನ್ನು ಪ್ರಾರಂಭಿಸಬಹುದು. ಇಲ್ಲದಿದ್ದರೆ ಹೊಸ ಬಡಾವಣೆಯಲ್ಲಿ ಸಿಎ ನಿವೇಶನ ಲಭ್ಯವಿವೆ, ಅಲ್ಲಿಯಾದರೂ ನಿರ್ಮಿಸಬೇಕು ಎಂದು ತಿಳಿಸಲಾಗಿದೆ.

‘ಗೋಕಾಕ ರಸ್ತೆ ಪಕ್ಕದಲ್ಲಿ ಸ್ಥಳದ ಬಗ್ಗೆ ನಮ್ಮೆಲ್ಲರ ವಿರೋಧವಿದೆ, ಆದ್ದರಿಂದ ಅದನ್ನು ಕೈಬಿಟ್ಟು ಬೇರೆ ಸ್ಥಳದಲ್ಲಿ ಸ್ಥಳಾಂತರಿಸಬೇಕು, ಇಲ್ಲದಿದ್ದರೆ ತಾಲ್ಲೂಕಿನ ಜನ ಪ್ರತಿಭಟನೆ ಮಾಡಲಾಗುವುದು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಜಯಕುಮಾರ ದೇಸಾಯಿ, ಯುವ ಮುಖಂಡ ಸಂತೋಷ ಹಾದಿಮನಿ, ರೈತಮುಖಂಡ ಮುದಕನಗೌಡ ದೇವರಡ್ಡಿ, ಶಂಕರ ಮುಗಳಿ, ಮಲ್ಲಿಕಾರ್ಜನ ಕಟಕೋಳ, ಅಶೋಕ ಅಂಗಡಿ, ಕಿಟದಾಳ, ಕಕಿಟ್ಟು ತೋರಗಲ್ಲ, ದಲಿತ ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-21-246723403

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.