ಯರಗಟ್ಟಿ: ‘ಭಕ್ತರು ತನು, ಮನ, ಧನಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸಿದರೆ ಮಠಗಳು ಬೆಳೆಯಲು ಸಾಧ್ಯ’ ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.

ಪಟ್ಟಣದ ಗೋಕಾಕ ರಸ್ತೆ ಪಕ್ಕದಲ್ಲಿರುವ ರಾಜರಾಜೇಶ್ವರಿ ಆಶ್ರಮದ ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇವಿಯ ಮಂದಿರದ ಅಭಿವೃದ್ಧಿಗಾಗಿ ಗಣಪತಿ ಶ್ರೀಗಳ ಶ್ರಮ ಅಪಾರವಾಗಿದೆ’ ಎಂದರು.

ಶಿಂದೋಗಿ ಮಠದ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ‘ಪ್ರಕೃತಿಯಲ್ಲಿರುವ ಸಕಲ ಜೀವರಾಶಿಯಲ್ಲಿಯೇ ಮನುಷ್ಯನಿಗೆ ಶ್ರೇಷ್ಠ ಸ್ಥಾನವಿದೆ. ಅಂತಹ ಜೀವನವನ್ನು ವ್ಯರ್ಥವಾಗಿ ಕಳೆಯದೇ ಸತ್ಸಂಗದಲ್ಲಿ ಬೆರೆತು ಜೀವನ ಸಾರ್ಥಕ ಮಾಡಿಕೊಳ್ಳಬೇಕು’ ಎಂದರು.

ರಾಜರಾಜೇಶ್ವರಿ ಮಠದ ಗಣಪತಿ ಸ್ವಾಮೀಜಿ, ಬಳ್ಳೂರ-ಹಂಪಿ-ಚಿಕ್ಕಮುನವಳ್ಳಿ ಮಠದ ವಿದ್ಯಾನಂದ ಭಾರತೀ ಸ್ವಾಮೀಜಿ, ಮುನವಳ್ಳಿ ಮಠದ ಮುರಘರಾಜೇಂದ್ರ ಸ್ವಾಮೀಜಿ, ಹಡಗಿನಾಳ ಮಠದ ಮಲ್ಲೇಶ ಶರಣರು, ತಹಶೀಲ್ದಾರ್ ಎಂ.ವಿ.ಗುಂಡಪ್ಪಗೋಳ, ಬೆಳಗಾವಿ ವೈದ್ಯ ರವಿ ಪಾಟೀ ಲ ಇದ್ದರು.

ವಿವಿಧ ಕ್ಷೇತ್ರಗಳ ಸಾಧಕರು ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-21-1646951212

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.